ಮನೆ ಮನರಂಜನೆ ‘ಓಎಂಜಿ 2’ ಸಿನಿಮಾದ ಟೀಸರ್ ಬಿಡುಗಡೆ

‘ಓಎಂಜಿ 2’ ಸಿನಿಮಾದ ಟೀಸರ್ ಬಿಡುಗಡೆ

0

ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ.

Join Our Whatsapp Group

ದೇವರನ್ನು ನಂಬುವ ವ್ಯಕ್ತಿಯ ಪಾತ್ರದಲ್ಲಿ ಅವರು ಟೀಸರ್​​ ನಲ್ಲಿ ಗಮನ ಸೆಳೆದಿದ್ದಾರೆ. ‘ನಂಬಿಕೆ ಇಡು, ನೀನು ಶಿವನ ದಾಸ’ ಎಂದು ಅಕ್ಷಯ್ ಕುಮಾರ್ ಅವರು ಪಂಕಜ್​ ಗೆ ಹೇಳುವ ಡೈಲಾಗ್​ ಗಮನ ಸೆಳೆದಿದೆ. ರೈಲ್ವೆ ನಿಲ್ದಾಣದ ಬಳಿ ಶಿವನ ತಲೆಯ ಮೇಲೆ ನೀರು ಬೀಳುತ್ತಿರುತ್ತದೆ. ಹಿಂಭಾಗದಲ್ಲಿ ಚಂದಿರ ಕಾಣುತ್ತಿರುತ್ತಾನೆ. ಈ ದೃಶ್ಯ ಅನೇಕರಿಗೆ ಇಷ್ಟ ಆಗಿದೆ.

‘ಓಎಂಜಿ 2’ ಚಿತ್ರವನ್ನು ಅಮಿತ್ ರಾಯ್ ಅವರು ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡುತ್ತಿದ್ದಾರೆ. ಪಂಕಜ್ ತ್ರಿಪಾಠಿ, ಅರುಣ್ ಗೋವಿಲ್ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 1987ರಲ್ಲಿ ಪ್ರಸಾರ ಕಂಡ ‘ರಾಮಾಯಣ’ದಲ್ಲಿ ಅರುಣ್ ಅವರು ರಾಮನ ಪಾತ್ರ ಮಾಡಿದ್ದರು. ‘ಓಎಂಜಿ 2’ ಚಿತ್ರದಲ್ಲೂ ರಾಮನ ಪಾತ್ರವನ್ನೇ ನೀಡಲಾಗಿದೆ.