ಮನೆ ಮನರಂಜನೆ ಬಾಲಿವುಡ್ ನಟ ಶಿವ ಸುಬ್ರಹ್ಮಣ್ಯಂ ನಿಧನ

ಬಾಲಿವುಡ್ ನಟ ಶಿವ ಸುಬ್ರಹ್ಮಣ್ಯಂ ನಿಧನ

0

ಮುಂಬೈ(Mumbai): ಬಾಲಿವುಡ್(Bollywood) ಹಿರಿಯ ನಟ(Actor), ಚಿತ್ರಕಥೆಗಾರ ಶಿವ ಸುಬ್ರಹ್ಮಣ್ಯಂ(Shiva subrahmanyam) ಸೋಮವಾರ ನಿಧನರಾಗಿದ್ದಾರೆ(Death).

ಬಾಲಿವುಡ್‌ ನಿರ್ಮಾಪಕರಾದ ಹನ್ಸಲ್‌ ಮೆಹ್ತಾ ಅವರು ಸೋಮವಾರ ಬೆಳಗ್ಗೆ ತಮ್ಮ ಟ್ವಿಟರ್‌ನಲ್ಲಿ ಶಿವ ಸುಬ್ರಹ್ಮಣ್ಯಂ ನಿಧನವನ್ನು ಖಚಿತಪಡಿಸಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈನ ಅಂಧೇರಿಯ ಶಿಶಿರಾ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ನಿರ್ಮಾಪಕ ಅಶೋಕ್ ಪಂಡಿತ್‌, ನಮ್ಮ ಆತ್ಮೀಯ ಸ್ನೇಹಿತ ಶಿವ ಸುಬ್ರಮಣ್ಯಂ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ನೋವಾಗಿದೆ. ಅವರ ಪತ್ನಿ ದಿವ್ಯಾ ಅವರಿಗೆ ನನ್ನ ಸಂತಾಪಗಳು. ದೇವರು ಅವರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

80ರ ದಶಕದಲ್ಲಿ ಅವರು ಬಾಲಿವುಡ್‌ ಪ್ರವೇಶ ಮಾಡಿದರು. 1989ರಲ್ಲಿ ಹಿಂದಿ ಸಿನಿಮಾ ’ಪರಿಂದಾ’ಗೆ ಚಿತ್ರಕಥೆ ಬರೆದು ಜನಪ್ರಿಯರಾದರು. ನಂತರ ತೆಲುಗು, ತಮಿಳು, ಹಿಂದಿಯ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡರು. ಆಲಿಯಾ ಭಟ್‌ ಅಭಿನಯದ ‘ಟು ಸ್ಟೇಟ್ಸ್’ ಸಿನಿಮಾದಲ್ಲಿ ಆಲಿಯಾ ತಂದೆಯ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

 ಇತ್ತೀಚೆಗೆ ಬಿಡುಗಡೆಯಾಗಿದ್ದ ’ಮೀನಾಕ್ಷಿ ಸುಂದರೇಶ್ವರ’ ಚಿತ್ರದಲ್ಲಿ ಶಿವ ಸುಬ್ರಮಣ್ಯಂ ನಟಿಸಿದ್ದರು.