ಮನೆ ದೇವರನಾಮ ಹಂಸಧ್ವನಿಯು ಕೇಳದೆ ನಿನಗೆ ಶಾರದೆ

ಹಂಸಧ್ವನಿಯು ಕೇಳದೆ ನಿನಗೆ ಶಾರದೆ

0

ಹಂಸಧ್ವನಿಯು ಕೇಳದೆ ನಿನಗೆ ಶಾರದೆ |

ಶೃಂಗಪುರದ ವರ ತುಂಗೆ ತೀರದ |

ಮಂಗಳಾಂಗಿ ಪರ ಬ್ರಹ್ಮನ ರಾಣಿ || ಹಂಸಧ್ವನಿಯು||

ಮಾಣಿಕ್ಯ ವೀಣೆಯ ನುಡಿಸುತಲಿ |

ಮರೆತೆಯ ಮಮತೆಯ ಮಕ್ಕಳನು |

ಮಧುರ ಭಾಷಿಣಿ |

ಸದಯ ರೂಪಿಣಿ ಶಾರದೆ || ನಿನ್ನ ಹಂಸಧ್ವನಿಯ||

ಕರದಲಿ ಗಿಳಿಯನು ಹಿಡಿಯುತಲಿ |

ಮರೆತಯ ಮಮತೆಯ ಮಕ್ಕಳನು |

ಶಶಿ ವಿಭೂಷಿಣಿ ಅಮೃತವರ್ಷಿಣಿ |

ಮಂಗಳ ರೂಪಿಣಿ ಶಾರದೆ ||ನಿನ್ನ ಹಂಸಧ್ವನಿಯೂ||

ಮುಡಿಯಲಿ ಚಂದ್ರನ ಧರಿಸುತಲಿ |

ಮರೆತೆಯ ಮಮತೆಯ ಮಕ್ಕಳನು |

ಅಕ್ಷರೂಪಿಣಿ ಅಕ್ಷಯ ವರ್ಣಿನಿ |

ಮೋಕ್ಷ ಪ್ರದಾಯಿನಿ ಶಾರದೆ || ನಿನ್ನಾ ಹಂಸಧ್ವನಿಯು ||