ಮನೆ ರಾಜ್ಯ ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ: ವಿದ್ಯಾರ್ಥಿನಿಯರ ಜತೆ ಬೀಚ್’ಗೆ ತೆರೆಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ: ವಿದ್ಯಾರ್ಥಿನಿಯರ ಜತೆ ಬೀಚ್’ಗೆ ತೆರೆಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

0

ಮಂಗಳೂರು: ನಗರದ ಬಿಜೈ ಕಾಲಿಕಾಡ್ ಪ್ರದೇಶದಲ್ಲಿ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದೆ.

Join Our Whatsapp Group

ಬೀಚ್ ಗೆ ತೆರೆಳಿದ್ದ ವಿದ್ಯಾರ್ಥಿಗಳನ್ನು ಹಿಂಬಾಲಿಸಿಕೊಂಡು ಬಂದು ತಂಡದಲ್ಲಿದ್ದ ಮಹಮ್ಮದ್ ಹಫೀಸ್ (20) ಮೇಲೆ ಶುಕ್ರವಾರ ರಾತ್ರಿ ಹಲ್ಲೆ ನಡೆಸಲಾಗಿದೆ.

ಎ.ಜೆ. ವೈದ್ಯಕೀಯ ಕಾಲೇಜಿನ ಹಾಸ್ಪಿಟಲ್ ಮ್ಯಾನೆಜ್ಮೆಂಟ್ ಕೋರ್ಸ್ ನ ವಿದ್ಯಾರ್ಥಿಗಳು  ಪಣಂಬೂರು ಬೀಚ್ ಗೆ ನಾಲ್ವರು  ವಿದ್ಯಾರ್ಥಿನಿಯರ ಸಹಿತ  6 ವಿದ್ಯಾರ್ಥಿ ಗಳ ತಂಡ ತೆರೆಳಿದ್ದಾಗ ಈ ಘಟನೆ ನಡೆದಿದೆ. ಅನ್ಯಕೋಮಿನ  ವಿದ್ಯಾರ್ಥಿಗಳೊಂದಿಗೆ ಈ ವಿದ್ಯಾರ್ಥಿನಿಯರು ತೆರೆಳಿದ್ದರು ಎಂದು ಆರೋಪಿಸಲಾಗಿದೆ.

ಗಾಯಗೊಂಡ ವಿದ್ಯಾರ್ಥಿ  ಹಫೀಸ್ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಪ್ರಕರಣ ದಾಖಲಾಗಿದೆ.