ಮನೆ ಮನರಂಜನೆ ಐಮ್ಯಾಕ್ಸ್ ನಿಂದ ಕೆ.ಜಿ.ಎಫ್. ಚಾಪ್ಟರ್- 2ರ ಪೋಸ್ಟರ್ ಬಿಡುಗಡೆ

ಐಮ್ಯಾಕ್ಸ್ ನಿಂದ ಕೆ.ಜಿ.ಎಫ್. ಚಾಪ್ಟರ್- 2ರ ಪೋಸ್ಟರ್ ಬಿಡುಗಡೆ

0

ಬೆಂಗಳೂರು(Bengaluru):  ದೇಶದ ಬಹು ನಿರೀಕ್ಷಿತ ಚಿತ್ರ ಕನ್ನಡ ಭಾಷೆಯ ಕೆಜಿಎಫ್: ಚಾಪ್ಟರ್ -2 (KGF: Chaper-2) ರ ವಿಶೇಷ ಪೋಸ್ಟರ್(Poster) ಅನ್ನು ಐಮ್ಯಾಕ್ಸ್ ಬಿಡುಗಡೆ(Release) ಮಾಡಿದೆ.

ಪ್ರಶಾಂತ್ ನೀಲ್ ಕಥೆ ಹಾಗೂ ನಿರ್ದೇಶನದ ಹೊಂಬಾಳೆ ಫಿಲ್ಮ್ಸ್ ನ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಕೆ.ಜಿ.ಎಫ್. ಚಾಪ್ಟರ್ ೨ರಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ.

ಕೋಲಾರದ ಚಿನ್ನದ ಗಣಿಗಳ ಹಿನ್ನೆಲೆಯ ಕಥೆಯನ್ನು ಹೊಂದಿರುವ ಇದು ಕೆ.ಜಿ.ಎಫ್. ಚಾಪ್ಟರ್ ೧ರ ಮುಂದುವರಿದ ಭಾಗವಾಗಿದ್ದು ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿ ಏಪ್ರಿಲ್ 14, 2022ರಂದು ಐಮ್ಯಾಕ್ಸ್ ಸ್ಕ್ರೀನ್‌ ಗಳಲ್ಲಿ ಬಿಡುಗಡೆಯಾಗಲಿದೆ.

ಐಮ್ಯಾಕ್ಸ್ ನ ಎಕ್ಸ್ ಕ್ಲ್ಯೂಸಿವ್ ಪೋಸ್ಟರ್‌ ನಲ್ಲಿ ರಾಕಿ ಎರಡೂ ಕೈಗಳಲ್ಲಿ ಆಯುಧಗಳನ್ನು ಹಿಡಿದು ಭಯಂಕರ ನೋಟ ಹೊಂದಿದ್ದು ಹಿನ್ನೆಲೆಯಲ್ಲಿ ಗೂಂಡಾಗಳಿರುವ ತನ್ನ ವಿನಾಶಕ್ಕೆ ಯತ್ನಿಸುವವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವಂತೆ ನಿಂತಿದ್ದಾರೆ.

ಕೆ.ಜಿ.ಎಫ್. ಚಾಪ್ಟರ್ ೨ ಐಮ್ಯಾಕ್ಸ್ ನಲ್ಲಿ ಬಿಡುಗಡೆ ಮಾಡುವ ಕುರಿತು ಇಂಟರ್‌ ನ್ಯಾಷನಲ್ ಡೆವಲಪ್‌ ಮೆಂಟ್ ಅಂಡ್ ಡಿಸ್ಟ್ರಿಬ್ಯೂಷನ್‌ ನ ಉಪಾಧ್ಯಕ್ಷ ಕ್ರಿಸ್ಟೋಫರ್ ಟಿಲ್‌ಮ್ಯಾನ್, “ಐಮ್ಯಾಕ್ಸ್ ತನ್ನ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವಲ್ಲಿ ಖ್ಯಾತಿ ಪಡೆದಿದೆ ಮತ್ತು ಕೆ.ಜಿ.ಎಫ್. ಚಾಪ್ಟರ್ ೨ರಂತಹ ಆ್ಯಕ್ಷನ್ ಸನ್ನದ್ಧ ಚಲನಚಿತ್ರ ಬಿಡುಗಡೆ ಮಾಡುವುದು ನಮಗೆ ಅತ್ಯಂತ ಸೂಕ್ತವಾಗಿದೆ. ಐಮ್ಯಾಕ್ಸ್ ಅನುಭವವು ಪ್ರೇಕ್ಷಕರಿಗೆ ಈ ಅದ್ಭುತ ಚಲನಚಿತ್ರ ವೀಕ್ಷಿಸುವ ಮತ್ತು ಭಾಗವಾಗುವ ಅವಕಾಶ ನೀಡುತ್ತಿದೆ. ಭಾರತವು ಸದೃಢ ಹಾಗೂ ವಿಸ್ತಾರ ಕಥೆ ಹೇಳುವಿಕೆ ಹಾಗೂ ಪ್ರತಿಭೆಗೆ ತವರಾಗಿದೆ ಹಾಗೂ ಕೆ.ಜಿ.ಎಫ್. ಚಾಪ್ಟರ್ 2 ಬಿಡುಗಡೆಯು ಐಮ್ಯಾಕ್ಸ್ ನಲ್ಲಿ ದೃಶ್ಯ ವೈಭವದ ಹಾಗೂ ಭಾವನಾತ್ಮಕವಾಗಿ ಸೆಳೆಯುವ ಕಥೆಗಳನ್ನು ಪ್ರಸ್ತುತಪಡಿಸುವಲ್ಲಿ ನಮ್ಮ ಬದ್ಧತೆಗೆ ಪೂರಕವಾಗಿದೆ” ಎಂದರು.

ಕೆ.ಜಿ.ಎಫ್. ಚಾಪ್ಟರ್ ೨ ಭಾರತದಲ್ಲಿ ಎಲ್ಲ ಐಮ್ಯಾಕ್ಸ್ ಸ್ಕ್ರೀನ್‌ ಗಳು ಮತ್ತು ವಿಶ್ವದ ಆಯ್ದ ಐಮ್ಯಾಕ್ಸ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.