ಗುರು: “ಖಡ್ಗಕ್ಕಿಂತ ಹರಿತವಾದ ಆಯುಧ ಯಾವುದು? ಯಾರು ಉತ್ತರ ಹೇಳಬಲ್ಲಿರಿ?”
ಒಬ್ಬ ಶಿಷ್ಯ: “ನನಗೆ ಉತ್ತರ ಗೊತ್ತು ಸಾರ್, ಹೆಂಡತಿಯ ನಾಲಿಗೆ ಎಲ್ಲಕ್ಕೂ ಹರಿತವಾದುದಂತೆ. ಹಾಗಂತ ನಮ್ಮ ಅಪ್ಪ ಯಾವತ್ತೋ ಹೇಳಿದ್ದನ್ನು ಕೇಳಿದ್ದೆ!”
****
ಒಂದು ದಿನ ಗೊರ್ಬಚೋವ್, ರೇಗನ್ ಮತ್ತು ರಾಜೀವ್‌ಗಾಂಧಿ ಒಂದೆಡೆ ಸೇರಿ ತಮ್ಮ ತಮ್ಮದೇಶಗಳ ಬಗ್ಗೆ ಏನು ಅಭಿಪ್ರಾಯವಿದೆ ಎಂಬುದನ್ನು ದೇವರನ್ನು ಕೇಳಿ ತಿಳಿದು ಕೊಳ್ಳಬೇಕೆಂದು ಬಯಸಿದರು. ಮೊದಲಿಗೆ ರಷ್ಯಾದ ಗೊರ್ಬಚೋವ್ ದೇವರನ್ನು ಕೇಳಿದರು: “ನಮ್ಮ ದೇಶ ಭ್ರಷ್ಟಾಚಾರದಿಂದ ಯಾವಾಗ ಮುಕ್ತವಾದೀತು?”
ದೇವರು: ಇನ್ನು ೨೬ ವರ್ಷಗಳಲ್ಲಿ.
ರೇಗನ್ ಇದೇ ಪ್ರಶ್ನೆಯನ್ನು ಹಾಕಿದಾಗ, ದೇವರು “ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಕನಿಷ್ಠ ಪಕ್ಷ ಒಂದು ಶತಮಾನವಾದರೂ ಬೇಕು” ಅಂದ. ನಮ್ಮ ಭಾರತದ ಬಗ್ಗೆ ಏನು ಹೇಳುತ್ತೀಯಾ ರಾಜೀವ್‌ಗಾಂಧಿ ದೇವರನ್ನು ಕೇಳಿದರು. ದೇವರ ಕಣ್ಣುಗಳಲ್ಲಿ ಬಳಬಳ ನೀರು ಬಂತು; ಅದನ್ನು ಒರೆಸಿಕೊಳ್ಳುತ್ತ ನಿಮ್ಮ ಭಾರತ ಭ್ರಷ್ಟಾಚಾರದಿಂದ ಮುಕ್ತ ವಾಗುವ ಹೊತ್ತಿಗೆ ನಾನು ಬದುಕಿರುವುದಿಲ್ಲವಲ್ಲಾ!” ಎಂದನಂತೆ