ಮನೆ ರಾಜ್ಯ ಚಾಮರಾಜನಗರ: ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದ ವ್ಯಕ್ತಿ ಸಾವು

ಚಾಮರಾಜನಗರ: ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದ ವ್ಯಕ್ತಿ ಸಾವು

0

ಚಾಮರಾಜನಗರ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಸಿದ್ದರಾಜು (40) ಮೃತ ದುರ್ದೈವಿ.

ಜುಲೈ 23 ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿ  ನೀರು ಎಂದು ಭಾವಿಸಿ ಟಾಯ್ಲೆಟ್ ಕ್ಲೀನಿಂಗ್ ​ಗೆ ಬಳಸುವ ಆ್ಯಸಿಡ್ ಕುಡಿದಿದ್ದಾನೆ. ಬಳಿಕ ಬಿದ್ದು ಒದ್ದಾಡುತ್ತಿದ್ದ ಸಿದ್ದರಾಜುನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ದುರಾದೃಷ್ಟವಶಾತ್ ಸೋಮವಾರ(ಜುಲೈ 24) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.