ಮನೆ ಮನರಂಜನೆ ಆಗಸ್ಟ್‌  4ಕ್ಕೆ ‘ಟೋಬಿ’ ಟ್ರೇಲರ್‌ ಬಿಡುಗಡೆ

ಆಗಸ್ಟ್‌  4ಕ್ಕೆ ‘ಟೋಬಿ’ ಟ್ರೇಲರ್‌ ಬಿಡುಗಡೆ

0

ನಿಮಗೆ ಗೊತ್ತಿರುವಂತೆ ರಾಜ್‌ ಬಿ ಶೆಟ್ಟಿ “ಟೋಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್‌ 25ರಂದು ತೆರೆಕಾಣುತ್ತಿದೆ.

Join Our Whatsapp Group

ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಸಿನಿಮಾದೊಳಗಿನ ಮಾಸ್‌ ಎಲಿಮೆಂಟ್ಸ್‌ ಅನ್ನು ಎತ್ತಿಹಿಡಿದಿದೆ. ರೆಡ್‌ ಥೀಮ್‌ ನೊಂದಿಗೆ ಮೂಡಿಬಂದಿರುವ ಈ ಫ‌ಸ್ಟ್‌ಲುಕ್‌ ನಲ್ಲಿ ರಾಜ್‌ ಬಿ ಶೆಟ್ಟಿ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಮುಖದ ತುಂಬಾ ಕುರುಚಲು ಗಡ್ಡ, ಮೂಗಿನಲ್ಲೊಂದು ದೊಡ್ಡ ಮೂಗುತಿ, ತಲೆ, ಮೂಗಿನ ಮೇಲೆ ರಕ್ತಸೋರುತ್ತಿರುವ ಗಾಯ … ಹೀಗೆ ಔಟ್‌ ಅಂಡ್‌ ಔಟ್‌ ಮಾಸ್‌ ಫೀಲ್‌ ಕೊಡುವ “ಟೋಬಿ’ ಚಿತ್ರದ ಫ‌ಸ್ಟ್‌ಲುಕ್‌ ವೈರಲ್‌ ಆಗಿದೆ. ಈಗ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಆಗಸ್ಟ್‌ 4ರಂದು ಅದ್ದೂರಿಯಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ.

“ಟೋಬಿ’ ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್‌ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್‌ ಬಜೆಟ್‌ನ ಚಿತ್ರ. ಲೈಟರ್‌ ಬುದ್ಧ ಫಿಲಂಸ್‌, ಅಗಸ್ತ್ಯ ಫಿಲಂಸ್‌ ಹಾಗೂ ಕಾಫಿ ಗ್ಯಾಂಗ್‌ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್‌ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ರಾಜ್‌ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್‌ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್‌ ಮುಕುಂದನ್‌ ಸಂಗೀತ ನಿರ್ದೇಶನ, ಪ್ರವೀಣ್‌ ಶ್ರೀಯನ್‌ ಛಾಯಾಗ್ರಹಣ, ಸಂಕಲನ ಹಾಗೂ ಅರ್ಜುನ್‌ ರಾಜ್‌ – ರಾಜಶೇಖರ್‌ ಅವರ ಸಾಹಸ ನಿರ್ದೇಶನ ಟೋಬಿ ಚಿತ್ರಕಿದೆ. ರಾಜ್‌ .ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ ರಾಜ್‌ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.