ಮನೆ ರಾಜ್ಯ ಮಂಗಳೂರು: ವಿಟ್ಲದಲ್ಲಿ ಬಾಲಕಿ ಮೇಲೆ ಐವರಿಂದ ಅತ್ಯಾಚಾರ

ಮಂಗಳೂರು: ವಿಟ್ಲದಲ್ಲಿ ಬಾಲಕಿ ಮೇಲೆ ಐವರಿಂದ ಅತ್ಯಾಚಾರ

0

ಮಂಗಳೂರು: ದಲಿತ ಬಾಲಕಿಯೊಬ್ಬಳ ಮೇಲೆ ಪ್ರತ್ಯೇಕವಾಗಿ ಮೂವರು ಅತ್ಯಾಚಾರ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.

Join Our Whatsapp Group

ಪೋಕ್ಸೋ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ಪೊಲೀಸರು ಅಕ್ಷಯ್ ದೇವಾಡಿಗ (24), ಕಮಲಾಕ್ಷ ಬೆಳ್ಚಾಡ (30), ಸುಕುಮಾರ ಬೆಳ್ಚಾಡ (28), ರಾಜ ಮತ್ತು ಜಯಪ್ರಕಾಶ್ ಎಂಬವರನ್ನು ಬಂಧಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಜಯಪ್ರಕಾಶ್ ಎಂಬಾತ 2019ರಲ್ಲಿ ತನ್ನ ಮನೆಯಲ್ಲೇ ದಲಿತ ಬಾಲಕಿಯನ್ನ ಕರೆದೊಯ್ದು ಅತ್ಯಾಚಾರಗೈದಿದ್ದಾನೆ. 2023ರ ಜನವರಿಯಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಕ್ಷಯ್ ಎಂಬಾತ ಇದೇ ಬಾಲಕಿಯನ್ನು ಶಾಲೆಯೊಂದರ ಬಳಿಗೆ ಬಲವಂತವಾಗಿ ಕರೆದೊಯ್ದು ಬೇರೆ ಬೇರೆ ದಿನಗಳಲ್ಲಿ ಮೂರು ಬಾರಿ ಅತ್ಯಾಚಾರವೆಸಗಿದ್ದಾನೆ.

2023ರ ಮೇ ತಿಂಗಳಿನಲ್ಲಿ ವಿಟ್ಲ ನಿವಾಸಿ ರಾಜ ಎಂಬಾತ ಬಾಲಕಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ತಾನು ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿ ಶಾಲೆಯೊಂದರ ಬಳಿಯಿರುವ ಗುಡ್ಡಕ್ಕೆ ಕರೆದೊಯ್ದು ಬಲವಂತವಾಗಿ ಬಾಲಕಿಯ ಇಚ್ಚೆಯ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಾನೆ.

2023 ಜೂನ್ ತಿಂಗಳ ಮೊದಲ ವಾರದಲ್ಲಿ ವಿಟ್ಲ ನಿವಾಸಿ ಸುಕುಮಾರ, ಆರೋಪಿ ಅಕ್ಷಯ್ ಮುಖಾಂತರ ದಲಿತ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆ ಬಳಿ ಹೋಗಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಂತರ ಆಕೆಯನ್ನು ಶಾಲೆಯೊಂದರ ಬಳಿಯರುವ ಗುಡ್ಡಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಇಚ್ಛೆಯ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಾನೆ.

2023 ಜುಲೈ 28 ರ ರಾತ್ರಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕಮಾಲಾಕ್ಷ ಎಂಬಾತ ಮದುವೆಯಾಗುವುದಾಗಿ ನಂಬಿಸಿ, ಬಾಲಕಿಯನ್ನು ತನ್ನ ಸಂಬಂಧಿಕರ ಮನೆಗೆ ಬರುವಂತೆ ಹೇಳಿದ್ದಾನೆ. ಬಳಿಕ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದಾನೆ.