ಮನೆ ಮನರಂಜನೆ ಮೊದಲ ದಿನವೇ 50 ಕೋಟಿ ರೂ ಕಲೆಕ್ಷನ್  ಮಾಡಿದ  ‘ಜೈಲರ್’ ಸಿನಿಮಾ

ಮೊದಲ ದಿನವೇ 50 ಕೋಟಿ ರೂ ಕಲೆಕ್ಷನ್  ಮಾಡಿದ  ‘ಜೈಲರ್’ ಸಿನಿಮಾ

0

ಕಾಲಿವುಡ್  ಸೂಪರ್ ಸ್ಟಾರ್   ರಜಿನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಮೊದಲ ದಿನ ಎಲ್ಲೆಡೆ ಹೌಸ್ ಫುಲ್ ಶೋ ಕಂಡಿದೆ.

ವಿಶ್ವದಾದ್ಯಂತ 7000 ಸ್ಕ್ರೀನ್ಗಳಲ್ಲಿ ಭರ್ಜರಿ ಓಪನಿಂಗ್ ನೊಂದಿಗೆ ಕಲೆಕ್ಷನ್ ವಿಚಾರದಲ್ಲಿ ದಾಖಲೆಯ ಓಟ ಮುಂದುವರೆಸಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಚಿತ್ರ ವೀಕ್ಷಿಸಿ, ಬೆಂಬಲ ನೀಡಿದ್ದಾರೆ.

‘ಜೈಲರ್’ ಸಿನಿಮಾ ಮೊದಲ ದಿನವೇ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ತನ್ನ ಮೊದಲ ದಿನ 52 ಕೋಟಿ ರೂಪಾಯಿ ಗಳಿಸಿದೆ.

ತಮಿಳುನಾಡಿನಿಂದ 23 ಕೋಟಿ ರೂ., ಕರ್ನಾಟಕದಿಂದ 11 ಕೋಟಿ ರೂ., ಕೇರಳದಿಂದ 5 ಕೋಟಿ ರೂ., ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ 10 ಕೋಟಿ ರೂ. ಮತ್ತು ಇತರ ರಾಜ್ಯಗಳಿಂದ 3 ಕೋಟಿ ರೂ. ಕಲೆಕ್ಷನ್ ಮಾಡಿ ಮೊದಲ ದಿನವೇ ಭರ್ಜರಿ ಓಪನಿಂಗ್  ಪಡೆದುಕೊಂಡಿದೆ.

ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದುಈ ಸಿನಿಮಾದಲ್ಲಿ ರಜನಿಕಾಂತ್, ಶಿವ ರಾಜ್ ಕುಮಾರ್, ಮೋಹನ್ ಲಾಲ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ‘ಜೈಲರ್’ ಒಂದು ಆಕ್ಷನ್ – ಪ್ಯಾಕ್ಡ್ ಎಂಟರ್ಟೈನರ್ ಚಿತ್ರ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ಕಲಾನಿತಿ ಮಾರನ್ ಅವರು ಸುಮಾರು  200 ಕೋಟಿ ರೂ. ಬಜೆಟ್ ನಲ್ಲಿ ಜೈಲರ್ ಅನ್ನು ನಿರ್ಮಿಸಿದ್ದಾರೆ.

ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ವಿಜಯ್ ಕಾರ್ತಿಕ್  ಕಣ್ಣನ್ ಛಾಯಾಗ್ರಹಣ ಮಾಡಿದ್ದಾರೆ.