ಮನೆ ರಾಷ್ಟ್ರೀಯ ಗುಜರಾತ್ ​ನ ಬಾವ್ಲಾ-ಬಗೋದರ್ ಹೆದ್ದಾರಿಯಲ್ಲಿ ಎರಡು ಟ್ರಕ್ ​ಗಳ ನಡುವೆ ಅಪಘಾತ: 10 ಮಂದಿ ಸಾವು

ಗುಜರಾತ್ ​ನ ಬಾವ್ಲಾ-ಬಗೋದರ್ ಹೆದ್ದಾರಿಯಲ್ಲಿ ಎರಡು ಟ್ರಕ್ ​ಗಳ ನಡುವೆ ಅಪಘಾತ: 10 ಮಂದಿ ಸಾವು

0

ಗುಜರಾತ್: ಗುಜರಾತ್ ​ನ ಬಾವ್ಲಾ-ಬಗೋದರ್ ಹೆದ್ದಾರಿಯಲ್ಲಿ ಎರಡು ಟ್ರಕ್ ​ಗಳ ನಡುವೆ ಅಪಘಾತ ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.

ಅಹಮದಾಬಾದ್​ ಗ್ರಾಮಾಂತರ ಎಸ್ ​ಪಿ ಈ ಕುರಿತು ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿಯ ಬಾಗೋದರ ಬಳಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಸಣ್ಣ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. ಮಿನಿ ಟ್ರಕ್‌ ನಲ್ಲಿದ್ದವರು ಚೋಟಿಲಾಗೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದಿದ್ದಾರೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಬಾಗೋದ್ರ ಬಳಿ ಅಪಘಾತಕ್ಕೀಡಾದವರೆಲ್ಲರೂ ಕಪಾಡ್ವಂಜ್‌ ನ ಸುನಾದ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ.