ಮನೆ ದೇವಸ್ಥಾನ ಪುಣ್ಯ ಕ್ಷೇತ್ರಗಳು: ಶಿವಗಂಗೆ

ಪುಣ್ಯ ಕ್ಷೇತ್ರಗಳು: ಶಿವಗಂಗೆ

0

ನೆಲಮಂಗಲ ತಾಲೂಕಿನಲ್ಲಿ ವಾಯುವ್ಯಕ್ಕಿರುವ ಗಿರಿಕ್ಷೆೇತ್ರ ಬೆಂಗಳೂರಿಗೆ 35km ದೂರದಲ್ಲಿದೆ ಶಿವಗಂಗೆ ಪ್ರಕೃತಿ ಸೌಂದರ್ಯದಿಂದಲೂ ಐತಿಹಾಸಿಕ ಐತಿಹ್ಯಗಳಿಂದಲೂ ಕೂಡಿರುತ್ತದೆ ಬೆಟ್ಟದ ಶಿಖರ ಸಮುದ್ರ ಮಟ್ಟದಿಂದ 4560 ಅಡಿಗಳಷ್ಟು ಎತ್ತರವಿದೆ.


ಶಿವಗಂಗೆ ಬೆಟ್ಟವನ್ನು ಪೂರ್ವದಿಂದ ನೋಡಿದರೆ ನಂದಿಯ ಹಾಗೂ ಪಶ್ಚಿಮ ದಿಕ್ಕಿನಿಂದ ನೋಡಿದರೆ ಗಣೇಶನ ಹಾಗೂ ಉತ್ತರ ದಿಕ್ಕಿನಿಂದ ನೋಡಿದರೆ ಸರ್ಪದ ಮತ್ತು ದಕ್ಷಿಣ ದಿಕ್ಕಿನಿಂದ ನೋಡಿದರೆ ಶಿವಲಿಂಗದಂತೆಯೂ ಕಾಣುತ್ತದೆ.
ಶಿವಗಂಗೆ ಬೆಟ್ಟಕ್ಕೆ ಹಿಂದೆ ಕಕ್ಕುದ್ಗಿರಿ ಎಂಬ ಹೆಸರಿದ್ದಿತು. ಇಲ್ಲಿ ಕ್ರಿಸ್ತಶಕ 12ನೇ ಶತಮಾನದಲ್ಲಿ ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲಾ ದೇವಿ ಮೃತಹೊಂದಿದಳು. ಬೆಟ್ಟದ ಮೇಲ್ತುದಿಗೆ ಹೋಗಿ ಕುಂಭಿ ಎನ್ನಲಾದ ಜಾಗದಿಂದ ಕೆಳಕ್ಕೆ ಹಾರಿ ಪ್ರಾಣಬಿಟ್ಟಳೆಂದು ಕತೆ ಇದೆ.
ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಶಿವಗಂಗೆ ಗಿರಿಕ್ಷೇತ್ರದ ದೇವಸ್ಥಾನಗಳಲ್ಲಿ ಗಂಗಾಧರೇಶ್ವರ ಹಾಗೂ ಹೊನ್ನಾದೇವಿ ಗುಡಿಗಳು ಪ್ರಸಿದ್ಧವಾಗಿದೆ. ಇದು ಸ್ವಾಭಾವಿಕವಾದ ಗುಹಾಂತರ ದೇವಾಲಯಗಳಾಗಿವೆ. ದೇವಸ್ಥಾನಗಳಿಗೆ ಹತ್ತಿ ಹೋಗಲು ಮೆಟ್ಟಿಲುಗಳಿವೆ ಬೆಟ್ಟದ ಪಾತಾಳ ಗಂಗೆಯು ಸೇರಿದಂತೆ 8 ಪವಿತ್ರ ತೀರ್ಥಗಳಿವೆ ಆರಂಭದಲ್ಲಿ ಒಂದು ಗೋಪುರ ಇದ್ದು ಅದರ ಎಡಭಾಗಕ್ಕೆ ಶಾಂತಲಾ ದೇವಿಯ ಜ್ಞಾಪಕಾರ್ಥವಾಗಿ ಕಟ್ಟಿಸಿದೆನ್ನಲಾದ ಶಾಂತೇಶ್ವರ ದೇವಾಲಯವಿದೆ. ಎಡಗಡೆ ಬಂಡೆಯಲ್ಲಿ ಕೊರೆದ ದೊಡ್ಡಗಣಪತಿ ಬಲಕ್ಕೆ ವೀರಭದ್ರ ದೇವಾಲಯ ಇದೆ.
ಮೆಟ್ಟಿಲೇರುತ್ತ ಬಂದಂತೆ ಸುಬ್ರಮಣ್ಯೇಶ್ವರ ಗುಡಿ ಸಿಗುತ್ತದೆ ಇಲ್ಲಿನ ಮೂರ್ತಿ ಸುಂದರ. ಮುಂಭಾಗದಲ್ಲಿ ಐದು ಮುಖಗಳು, ಹಿಂಭಾಗದಲ್ಲಿ ಒಂದು ಮುಖವು ಇದೆ, 12 ಕೈಗಳು.
ಗಂಗಾಧರೇಶ್ವರ ದೇವಸ್ಥಾನ ನೋಡಬೇಕಾದ ಮುಖ್ಯ ದೇವಾಲಯ ಇಲ್ಲಿ ಹಲವು ಸುಂದರ ವಿಗ್ರಹಗಳಿವೆ, ಗಣಪತಿ ಸುಂದರ ಮೂರ್ತಿ, ಚಂಡಿಕೇಶ್ವರ, ತಾಂಡವ ಗಣಪತಿ, ಪ್ರತಿಮೆಗಳಿವೆ.
ಕೆಂಪೇಗೌಡ ಮತ್ತು ಅವನಾ ತಮ್ಮಂದಿರವೆಂದು ಹೇಳಲಾಗುವ ಉಳಿದ ಬಸವಯ್ಯ ಮತ್ತು ಕೆಂಪು ಸೋಮಣ್ಣ ಇವರ ಪ್ರತಿಮೆಗಳಿವೆ ಕೆಂಪೇಗೌಡನ ಪ್ರತಿಮೆ ನಾಲ್ಕು ಅಡಿಎತ್ತರವಿದೆ. ಹಜಾರದಲ್ಲಿ ನಾಲ್ಕು ದೊಡ್ಡ ಗಂಟೆಗಳಿದ್ದು ಒಂದನ್ನು ಓಂಕಾರ ಗಂಟೆಎನ್ನುತ್ತಾರೆ. ಕೆಂಪೇಗೌಡನು ಈ ಘಂಟೆಯನ್ನು ಕೊಟ್ಟ ಎಂದು ಹೇಳುವರು. ಗುಡಿಯ ಗೋಡೆಯ ಮೇಲೆ ಗಿರಿಜಾ ಕಲ್ಯಾಣದ ಸುಂದರ ಕೆತ್ತನೆ ಇದೆ.
ಹೊನ್ನಾದೇವಿ ವಿಗ್ರಹ 5 ಅಡಿ ಎತ್ತರವಿದೆ 8 ಕೈಗಳು ಚಂಡ ಮತ್ತು ಮುಂಡ ಎಂಬ ರಾಕ್ಷಸರನ್ನು ಮೆಟ್ಟಿ ಕುಳಿತಿರುವ ಭಂಗಿ ರೌದ್ರಕಾರ.
ಎಮ್ಮೆ ಬಸವನ ವಿಗ್ರಹ, ಗಂಜಿ ವೀರಭದ್ರ ಸ್ವಾಮಿ ದೇವಸ್ಥಾನ, ಗಾರೆ ಬಸವಣ್ಣ, ಗವಿಯಲ್ಲಿ ಐದು ಭಕ್ತ ವಿಗ್ರಹಗಳು, ಕೋಡುಗಲ್ಲು ಬಸವ ಇಲ್ಲಿ ನೋಡಬೇಕಾದವು. ಕೊಡುಗಲ್ಲು ಬಸವನನ್ನು ಪ್ರದಕ್ಷಿಣೆ ಮಾಡಿದವರಿಗೆ ಇಷ್ಟಾರ್ಥ ಸಿದ್ಧಿ ಆಗುವುದೆಂಬ ನಂಬಿಕೆ ಇದೆ.
ದೀಪದ ಕಂಬ ತೀರ್ಥದ ಕಂಬ ಪಶ್ಚಿಮಕ್ಕಿದ್ದು ಈ ಸ್ಥಳದಲ್ಲಿ ವೀರಭದ್ರ ಹಾಗೂ ಶಿವಾಲಯಗಳಿವೆ.
ಶಿವಗಂಗಾ ಕ್ಷೇತ್ರದಲ್ಲಿ ಪ್ರತಿವರ್ಷ ಸಂಕ್ರಾಂತಿ ಕಾಲದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಚೈತ್ರ ಬಹುಳದಲ್ಲಿ ಹೊನ್ನಾದೇವಿ ರಥೋತ್ಸವವು ಪಾಲ್ಗುಣ ಮಾಸದಲ್ಲಿ ಗಂಗಾಧರೇಶ್ವರ ರಥೋತ್ಸವಗಳು ನಡೆಯುತ್ತದೆ.
ಬೆಟ್ಟದ ತಪ್ಪಲಿನಲ್ಲಿ ಊರಿನಲ್ಲಿ ಒಂದು ಬ್ರಾಹ್ಮಣ ಮಠವಿದೆ. ಇಲ್ಲಿ ಅಮೃತಶಿಲೆಯ ಶಾರದಾದೇವಿ ವಿಗ್ರಹವಿದು ತುಂಬಾ ಸುಂದರವಾಗಿರುತ್ತದೆ. ಇಲ್ಲಿಗೆ ಸಮೀಪದ ಕಲ್ಯಾಣಿ ಮೆಟ್ಟಿಲುಗಳ ಕೈಪಿಡಿ ಮೇಲೆ ರಾಮಾಯಣ ಭಾಗವತ ಪುರಾಣಗಳ ಕಥೆಗಳ ಕೆತ್ತನೆಗಳಿಗೆ.

ಹಿಂದಿನ ಲೇಖನಗುಜರಾತ್ ​ನ ಬಾವ್ಲಾ-ಬಗೋದರ್ ಹೆದ್ದಾರಿಯಲ್ಲಿ ಎರಡು ಟ್ರಕ್ ​ಗಳ ನಡುವೆ ಅಪಘಾತ: 10 ಮಂದಿ ಸಾವು
ಮುಂದಿನ ಲೇಖನಚಾಮರಾಜನಗರ: ಹಾಡುಹಗಲೇ ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ದರೋಡೆ- ನಾಲ್ವರ ಬಂಧನ