ಮನೆ ರಾಜ್ಯ ಬೆಂಗಳೂರು ಏರ್​ ಪೋರ್ಟ್ ​​ನಲ್ಲಿ ಪ್ರಯಾಣಿಕನಿಂದ 30 ಚಿನ್ನದ ಬಿಸ್ಕೆಟ್ ವಶ

ಬೆಂಗಳೂರು ಏರ್​ ಪೋರ್ಟ್ ​​ನಲ್ಲಿ ಪ್ರಯಾಣಿಕನಿಂದ 30 ಚಿನ್ನದ ಬಿಸ್ಕೆಟ್ ವಶ

0

ದೇವನಹಳ್ಳಿ: ಬೆಂಗಳೂರು ಏರ್​ ಪೋರ್ಟ್ ​​ನಲ್ಲಿ 30 ಚಿನ್ನದ ಬಿಸ್ಕೆಟ್​ ಗಳನ್ನು ಕೆಂಪೇಗೌಡ ಏರ್ ​ಪೋರ್ಟ್​​ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ ಕೋಲ್ಕತ್ತಾದಿಂದ ಅಕ್ರಮವಾಗಿ ಈ ಚಿನ್ನದ ಬಿಸ್ಕೆಟ್ ಸಾಗಿಸುತ್ತಿದ್ದ ಎಂದು ತಿಳಿದುಬಂದಿದ್ದು, ಒಟ್ಟು 36 ಲಕ್ಷ ರೂಪಾಯಿ ಮೌಲ್ಯದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್ ​​ಗಳನ್ನು ಜಫ್ತಿ ಮಾಡಲಾಗಿದೆ.

ಸದರಿ ಚಿನ್ನದ ಮಾಲಿನೊಂದಿಗೆ ಆಗಮಿಸಿದ್ದ ಪ್ರಯಾಣಿಕ ಕೋಲ್ಕತ್ತಾದಿಂದ ಏರ್​​ ಪೋರ್ಟ್​ ಗೆ ಬಂದಿಳಿದಿದ್ದ ಈ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ.

ಚಿನ್ನದ ಬಿಸ್ಕೆಟ್ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.