ಮನೆ ರಾಷ್ಟ್ರೀಯ ಮಹರಾಷ್ಟ್ರ: ಕೊಲ್ಹಾಪುರದಲ್ಲಿ 3.4 ತೀವ್ರತೆಯ ಭೂಕಂಪ

ಮಹರಾಷ್ಟ್ರ: ಕೊಲ್ಹಾಪುರದಲ್ಲಿ 3.4 ತೀವ್ರತೆಯ ಭೂಕಂಪ

0

ಮಹರಾಷ್ಟ್ರ: ಕೊಲ್ಹಾಪುರದಲ್ಲಿ ಬೆಳಗ್ಗೆ 06.45ಕ್ಕೆ ಲಘು ಭೂಕಂಪ ಸಂಭವಿಸಿದ್ದು, 3.4 ತೀವ್ರತೆ ದಾಖಲಾಗಿದೆ. 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಕೊಲ್ಹಾಪುರವು ಪಶ್ಚಿಮ ಮಹಾರಾಷ್ಟ್ರದಲ್ಲಿದೆ, ಮುಂಬೈನಿಂದ ಸುಮಾರು 375 ಕಿಮೀ ದೂರದಲ್ಲಿದೆ. ಈ ನಡುವೆ ಸತಾರಾ ಜಿಲ್ಲೆಯ ಪಟಾನ್ ನಗರ ಸೇರಿದಂತೆ ಸಮೀಪದ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ.

ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ಕೊಯ್ನಾ ಅಣೆಕಟ್ಟಿನಿಂದ 20 ಕಿ.ಮೀ ದೂರದಲ್ಲಿ ಭೂಕಂಪನದ ಅನುಭವವಾಗಿದ್ದು, ಅಣೆಕಟ್ಟು ಸುರಕ್ಷಿತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹಿಂದಿನ ಲೇಖನಬೆಂಗಳೂರು ಏರ್​ ಪೋರ್ಟ್ ​​ನಲ್ಲಿ ಪ್ರಯಾಣಿಕನಿಂದ 30 ಚಿನ್ನದ ಬಿಸ್ಕೆಟ್ ವಶ
ಮುಂದಿನ ಲೇಖನವರಂಗಲ್ ನಲ್ಲಿ ರಸ್ತೆ ಅಪಘಾತ: ಐವರು ಸಾವು