ಮನೆ ಹಾಸ್ಯ ಹಾಸ್ಯ

ಹಾಸ್ಯ

0

Join Our Whatsapp Group

ಕುಮಾರ : ಅಪ್ಪ ನೀನು ನನ್ನ ವಯಸ್ಸಿನಲ್ಲಿ ಯಾರನ್ನಾದರೂ ಪ್ರೀತಿ ಮಾಡಿದ್ದೀಯಾ,?

ಅಪ್ಪ : ಹೌದೋ ಮಂಗ ಅದಂತೂ ದುರಂತ ಸಂಗತಿ

***

ಕುಮಾರ : ನಿನ್ ಲವರ್ ಸತ್ತು ಹೋದಲಳಾಪ್ಪ

 ಅಪ್ಪ :ಆ ಪುಣ್ಯ ನನಗೆಲ್ಲಿ ಅದು ಪ್ರೀತಿಸಿದ ತಪ್ಪಿಗೆ ನಿಮ್ಮ ತಾಯಿನ ಮದುವೆಯಾದೆ.

**

ತಾಯಿ : ಕರೆಂಟು ಇಲ್ಲ, ಸೀಮೆಎಣ್ಣೆನು ಇಲ್ಲ ಹೇಗೋ ಬೋಂಡಾ ಮಾಡ್ಲಿ?

ಪಾಪು : ಸೀಮೆಎಣ್ಣೆ ಬೋಂಡ ಬೇಡಮ್ಮ ಕಡ್ಲೆಕಾಯಿ ಎಣ್ಣೆಲ್  ಮಾಡು.

**

ಸೋಮು : ಎಂತಾ ದರಿದ್ರ ಬ್ಲೇಡು ಒಂದು ಸಲಕ್ಕೆ ಮುಂಡಾಗಿದೆ. 

ಪುಟ್ಟ : ಯಾಕಪ್ಪ ಬೆಳಗೆ ನಾನು ಪೆನ್ಸಿಲ್ ಜೀವಿದೆ ಅದು ಆಗ ಚೂಪಾಗಿ ಇತ್ತಲ್ಲ?

**

ಜಡ್ಜ್ : ಹೋದ ಸಾರಿನೇ ನಿನ್ನನ್ನು ಮತ್ತೊಮ್ಮೆ ಇಲ್ಲಿ ನೋಡಲು ನನಗಿಷ್ಟವಿಲ್ಲವೆಂದು ಹೇಳಿರಲಿಲ್ವೆ?

 ಅಪರಾಧಿ : ಅದನ್ನೇ ಸಾರ್ ನಾನು ಈ ಪೊಲೀಸರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾ ಇದ್ದೆ

*

ಬಾಬು: ನನಗೆ ಯಾಕೋ ಅನುಮಾನ ಕಣೋ… ನನ್ನ ಹೆಂಡ್ತಿ ರಾಮ ಅನ್ನೋ ಹುಡುಗನನ್ನ ಪ್ರೀತಿಸ್ತಾ ಇದ್ಲು ಅಂತ ಕಾಣುತ್ತೆ.

ರಂಗ :ಯಾಕೆ ಹಾಗೆ ಹೇಳ್ತೀಯಾ ? ಈಗ್ಯಾಕೆ ನಿನಗೆ ಆ ಅನುಮಾನ ಬಂತು ?

 ಬಾಬು : ಇನ್ನೇನು ಮತ್ತೆ ನನಗೆ ಆರಾಮ ಬೇಕು, ಆರಾಮ ಬೇಕು ಅಂತಾನೆ ಇರ್ತಾಳೆ..