ಮನೆ ಆರೋಗ್ಯ ದೇಶದಲ್ಲಿ 2183 ಕೊರೊನಾ ಪ್ರಕರಣ ಪತ್ತೆ

ದೇಶದಲ್ಲಿ 2183 ಕೊರೊನಾ ಪ್ರಕರಣ ಪತ್ತೆ

0

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 2,183 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಶೇಕಡ 90ರಷ್ಟು ಹೆಚ್ಚಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದುಬಂದಿದೆ.

ಭಾನುವಾರ 1,150 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇನ್ನು, ದೇಶದಲ್ಲಿ ಒಂದೇ ದಿನ 214 ಮಂದಿ ಕೋವಿಡ್ ಸೋಂಕಿತರು ಅಸುನೀಗಿದ್ದಾರೆ.

ಸದ್ಯ, ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 11,542 ರಷ್ಟಿದ್ದು, 24 ಗಂಟೆಗಳಲ್ಲಿ 1,985 ಮಂದಿ ಚೇತರಿಸಿಕೊಂಡಿದ್ದಾರೆ.ಈವರೆಗೆ ದೇಶದಲ್ಲಿ 186.52 ಕೋಟಿ ಡೋಸ್ ಕೋಟಿ ಲಸಿಕೆ ವಿತರಣೆ ಮಾಡಲಾಗಿದೆ.