ಕ್ಲಾಸಿನ ವಿದ್ಯಾರ್ಥಿಗಳಿಗೆ ಹವಗುಣಕ್ಕೂ, ಹವಾಮಾನಕ್ಕೂ ವ್ಯತ್ಯಾಸ ಬರೆಯಲು ಹೇಳಿದಾಗ ಅವನು ಬರೆದದ್ದು ಹೀಗೆ.
ಹವಗುಣ ನಾವು ನಿರೀಕ್ಷಿಸುವಂಥದ್ದು, ಹವಾಮಾನ ನಾವು ಪಡೆಯುವಂತಹದ್ದು.
****
ಓದುಗ : ನಿಮ್ಮ ಕಾದಂಬರಿ ಕಾಣೆಯಾದವಳು ತುಂಬಾ ಚೆನ್ನಾಗಿತ್ತು. ಆದರೆ ಅದರಲ್ಲಿ ನಾಯಕಿ ಸಾಯಿಸಬಾರದಿತ್ತು.
ಲೇಖಕ : ನನಗೂ ಹಾಗೆ ಅನಿಸಿತು. ಆದರೆ ಅದು ಅನಿವಾರ್ಯ ಆಗಿತ್ತು.
ಓದುಗ : ಯಾಕೆ ಅನಿವಾರ್ಯ ? ಕಥೆ ಬದಲಾಯಿಸಬಹುದಿತ್ತಲ್ಲ.
ಲೇಖಕ: ಬದಲಾಯಿಸಬಹುದು. ಆದರೆ ಅಷ್ಟರಲ್ಲಿ ಪೆನ್ನಲ್ಲಿ ಇಂಕು ಮುಗಿದು ಹೋಗ್ತಾಬಂದಿತ್ತು.
****
“ನನಗೆ ಈ ಜಗತ್ತು ನೋಡಬೇಕೆಂದು ಇಚ್ಛೆಯಾಗಿದೆ ಕಾಣಿಸುವಿರಾ ?”ಎಂದಳು ಹೆಂಡತಿ.
ಗಂಡ ಜಗತ್ತಿನ ನಕಾಶೆಯನ್ನು ತಂದು ಮುಂದಿಟ್ಟ.
****
ಬಾಲು : ನನಗೆ ಈ ತೆಂಗಿನ ಮರ ಹತ್ತಿ ನೋಡಿದರೆ, ಇಂಜಿನಿಯರಿಂಗ್ ಕಾಲೇಜು ಹುಡುಗೀರು ಕಾಣಿಸ್ತಾರೆ ಗೊತ್ತಾ ?
ಜಗ್ಗು : ಹತ್ತಿದ ಮೇಲೆ ಕೈ ಬಿಟ್ಟು ನೋಡು ಮೆಡಿಕಲ್ ಕಾಲೇಜ್ ಹುಡುಗೀರು ಕಾಣುತ್ತಾರೆ.
****
ಗಂಡನ ಗುಟ್ಟು ರಟ್ಟಾಗಿತ್ತು. ರಮಾ ಸಿಟ್ಟಿನಿಂದ ಹೇಳಿದಳು” ಏನ್ರೀ, ನಾನು ಬದುಕಿರುವಾಗಲೇ ಆ ಮೀನಾಕ್ಷಿನ ಮದುವೆ ಆಗ್ತಿದೀರಂತೆ”,
“ಹೌದು ಕಣೆ, ನೀನು ಸತ್ತು ಹೋದರೆ ಆಗೋ ದುಃಖ ನನ್ನ ಕೈಯಲ್ಲಿ ತಡೆಯೋಕೆ ಆಗಲ್ಲ ಆಗ ಸಮಾಧಾನ ಮಾಡಕ್ಕೆ ಒಬ್ಬರು ನಿನ್ನ ಸ್ಥಾನದಲ್ಲಿ ಇರೋದು ಬೇಡವೇ”.