ಮನೆ ಅಪರಾಧ ಚೆನ್ನೈ: ಬಿರಿಯಾನಿ ವಿಚಾರಕ್ಕೆ ಗಲಾಟೆ, ಯುವಕನ ಕೊಲೆ

ಚೆನ್ನೈ: ಬಿರಿಯಾನಿ ವಿಚಾರಕ್ಕೆ ಗಲಾಟೆ, ಯುವಕನ ಕೊಲೆ

0

ಚೆನ್ನೈ: ಬಿರಿಯಾನಿ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನ ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಮೃತರನ್ನು ಬಾಲಾಜಿ(22) ಎಂದು ಗುರತಿಸಲಾಗಿದ್ದು, ಈತ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಈ ಯುವಕ ರಾತ್ರಿ ಊಟ ಮಾಡಲು ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ಸ್ನೇಹಿತರೊಂದಿಗೆ ಬಂದು ಬೀದಿಬದಿಯ ಸ್ಟಾಲ್​​ ಒಂದರಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದಾನೆ. ಇದೇ ಸಮಯಕ್ಕೆ ಮದ್ಯಪಾನ ಮಾಡಿರುವ ಮೂವರು ವ್ಯಕ್ತಿಗಳು ಅದೇ ಸ್ಟಾಲ್​​​ ಗೆ ಬಂದು, ಅವರು ಕೂಡ ಆರ್ಡರ್ ಮಾಡಿದ್ದಾರೆ. ಸ್ಟಾಲ್​​ ಮಾಲೀಕ ಮೊದಲು ಆರ್ಡರ್ ಮಾಡಿದವರಿಗೆ ಬಿರಿಯಾನಿ ನೀಡಿದ್ದಾನೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈ ಮೂವರು ಕುಡುಕರು ಬಾಲಾಜಿಗೆ ರಾಡ್​​’ನಿಂದ ಹೊಡೆದು ಕೊಂದಿದ್ದಾರೆ.

ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂರತೆ ಚೆನ್ನೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.