ಮನೆ ರಾಷ್ಟ್ರೀಯ ಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ ಪ್ರವಾಸಿ ರೈಲಿನ ಕೋಚ್‌ ನಲ್ಲಿ ಅಗ್ನಿ ಅವಘಡ: 9 ಮಂದಿ ಸಾವು,...

ಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ ಪ್ರವಾಸಿ ರೈಲಿನ ಕೋಚ್‌ ನಲ್ಲಿ ಅಗ್ನಿ ಅವಘಡ: 9 ಮಂದಿ ಸಾವು, ಹಲವರಿಗೆ ಗಾಯ

0

ಚೆನ್ನೈ: ಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ  ಪ್ರವಾಸಿ ರೈಲಿನ ಕೋಚ್‌ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,  9  ಮಂದಿ ಸಾವನ್ನಪ್ಪಿ ಹಲವಾರು ಗಾಯಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಮಧುರೈ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು. ಕೋಚ್‌ ನಲ್ಲಿದ್ದ ಗ್ಯಾಸ್ ಸಿಲಿಂಡರ್‌ ಸೋರಿಕೆಯಾಗಿರುವುದೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾಗಿದ್ದು, ಪರಿಣಾಮ ಪ್ರಯಾಣಿಕರು ರೈಲಿನೊಳಗೆ ಸಿಲುಕಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಕೋಚ್ ಲಕ್ನೋದಿಂದ ಮಧುರೈಗೆ ಆಗಮಿಸಿದಾಗ ಘಟನೆ ಬೆಳಿಗ್ಗೆ 5.15 ರ ಸುಮಾರಿಗೆ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.