ಮನೆ ರಾಷ್ಟ್ರೀಯ ಬಿಹಾರ: ನಿಂತಿದ್ದ ಟ್ರಕ್‌ಗೆ ಸ್ಕಾರ್ಪಿಯೋ ಡಿಕ್ಕಿ, ಒಂದೇ ಕುಟುಂಬದ 7 ಮಂದಿ ಸಾವು

ಬಿಹಾರ: ನಿಂತಿದ್ದ ಟ್ರಕ್‌ಗೆ ಸ್ಕಾರ್ಪಿಯೋ ಡಿಕ್ಕಿ, ಒಂದೇ ಕುಟುಂಬದ 7 ಮಂದಿ ಸಾವು

0

ಬಿಹಾರ: ರಸ್ತೆಬದಿಯಲ್ಲಿ ನಿಂತಿದ್ದ ಟ್ರೇಲರ್ ಟ್ರಕ್‌ ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಸಸಾರಂ ಪಟ್ಟಣದ ಶಿವಸಾಗರ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ವರದಿಗಳ ಪ್ರಕಾರ, ಕುಟುಂಬವು ಜಾರ್ಖಂಡ್‌ ನ ರಾಜರಪ್ಪ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಎಸ್‌ ಯುವಿಯಲ್ಲಿ ಚಾಲಕನ ಹೊರತಾಗಿ 11 ಮಂದಿ ಪ್ರಯಾಣಿಸುತ್ತಿದ್ದು, ಅದು ಅತಿವೇಗವಾಗಿ ಚಲಿಸುತ್ತಿತ್ತು ಎನ್ನಲಾಗಿದೆ. ಅತಿವೇಗದ ಚಾಲನೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಾಜಮತಿ ದೇವಿ (55), ಅವರ ಪುತ್ರಿ ಸೋನಿ ಕುಮಾರಿ (35), ಅವರ ಅಳಿಯ ಅರವಿಂದ್ ಶರ್ಮಾ (40) ಎಂದು ಗುರುತಿಸಲಾಗಿದೆ. ಮೊಮ್ಮಕ್ಕಳಾದ ಆದಿತ್ಯ ಕುಮಾರ್ (8) ಮತ್ತು ರಿಯಾ ಕುಮಾರಿ (9). ಅಲ್ಲದೆ, ಅಪಘಾತದಲ್ಲಿ ಅರವಿಂದ್ ಅವರ ಸೊಸೆ ತಾರಾ ಕುಮಾರಿ (22) ಮತ್ತು ಚಾಂದನಿ ಕುಮಾರಿ (15) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬವು ಕೈಮೂರ್ ಜಿಲ್ಲೆಯವರು ಎಂದು ಅವರು ಹೇಳಿದರು. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತಕ್ಕೀಡಾದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.