ಮನೆ ಮನರಂಜನೆ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು ಜನನ

ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು ಜನನ

0

ಮುಂಬೈ(Mumbai): ಬಹುಭಾಷಾ ನಟಿ ಕಾಜಲ್ ಅಗರ್ವಾಲ್(Kajal Agarwal) ಹಾಗೂ ಗೌತಮ್ ಕಿಚ್ಲು(Gowtham Kichlu) ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ತಾಯಿ ಮಗು ಆರೋಗ್ಯವಾಗಿದ್ದು, 2020ರ ಅಕ್ಟೋಬರ್ 30ರಂದು ವಿವಾಹವಾಗಿದ್ದ ಕಾಜಲ್ ಅಗರ್ವಾಲ್ ಕಳೆದ ಜನವರಿಯಲ್ಲಿ ತಾವು ಅಮ್ಮನಾಗುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಮಗು ಹುಟ್ಟಿದ ವಿಷಯವನ್ನು ಈ ಜೋಡಿ ಇನ್ನೂ ಬಹಿರಂಗಪಡಿಸಿಲ್ಲ.

ಹಿಂದಿ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಾಜಲ್ ಅಗರ್ವಾಲ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. 2009ರಲ್ಲಿ ತೆರೆಗೆ ಬಂದ ಮಗಧೀರ ಸಿನಿಮಾ ಕಾಜಲ್ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಈ ಸಿನಿಮಾ ಬಳಿಕ ಆರ್ಯ-2, ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ಮೆರ್ಸೆಲ್, ಜನತಾ ಗ್ಯಾರೇಜ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.