ಮನೆ ಮನರಂಜನೆ ಅಮೆರಿಕದ ಟೆಕ್ಸಾಸ್​ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ಸಮಾವೇಶ’: ಪಂಚೆ ಧರಿಸಿ ಡ್ಯಾನ್ಸ್ ಮಾಡಿದ ಶಿವರಾಜ್...

ಅಮೆರಿಕದ ಟೆಕ್ಸಾಸ್​ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ಸಮಾವೇಶ’: ಪಂಚೆ ಧರಿಸಿ ಡ್ಯಾನ್ಸ್ ಮಾಡಿದ ಶಿವರಾಜ್ ಕುಮಾರ್

0

ಬೆಂಗಳೂರು: ಅಮೆರಿಕದ ಟೆಕ್ಸಾಸ್​ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ನಡೆಯುತ್ತಿದೆ. ಸೆಪ್ಟೆಂಬರ್​ 1ರಿಂದ ಇಂದಿನವರೆಗೆ ಈ ಸಮಾರಂಭ ನಡೆಯುತ್ತಿದೆ. ಇದರಲ್ಲಿ ಶಿವರಾಜ್​ಕುಮಾರ್​ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.

ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬಂದರು. ವೇದಿಕೆ ಮೇಲೆ ಶಿವರಾಜ್ ಕುಮಾರ್ ಅವರು ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂಚೆ ಧರಿಸಿ ಶಿವಣ್ಣ ಕುಣಿದ ಪರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಶಿವಣ್ಣನ ಎನರ್ಜಿ ಕಂಡು ಎಲ್ಲರೂ ವಾವ್​ ಎನ್ನುತ್ತಿದ್ದಾರೆ. ‘ಘೋಸ್ಟ್​, ‘ಕರಟಕ ದಮನಕ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶಿವರಾಜ್​ಕುಮಾರ್​ ಅವರು ಬ್ಯುಸಿ ಆಗಿದ್ದಾರೆ.