ಮನೆ ಮನರಂಜನೆ ಆರೋಗ್ಯ ತಪಾಸಣೆಗೆ ಒಳಗಾಗಿ, ಶಕ್ತಿಧಾಮಕ್ಕೆ ಹಿಂತಿರುಗಿದ ನಟ ಶಿವರಾಜ್ ಕುಮಾರ್

ಆರೋಗ್ಯ ತಪಾಸಣೆಗೆ ಒಳಗಾಗಿ, ಶಕ್ತಿಧಾಮಕ್ಕೆ ಹಿಂತಿರುಗಿದ ನಟ ಶಿವರಾಜ್ ಕುಮಾರ್

0

ಮೈಸೂರು(Mysuru): ನಟ(Actor) ಶಿವ ರಾಜಕುಮಾರ್(Shiva Rajkumar) ಅವರು ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಬುಧವಾರ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ಶಕ್ತಿಧಾಮ ಸಂಸ್ಥೆಗೆ ಹಿಂತಿರುಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಕ್ತಿಧಾಮ ಖಜಾಂಚಿ ಸುಮನಾ, ‘ಶಿವ ರಾಜಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬುದು ಸುಳ್ಳು ಸುದ್ದಿ. ಅವರು ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿ ವಾಪಸ್ ಶಕ್ತಿಧಾಮಕ್ಕೆ ಬಂದು‌ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.