ಮನೆ ರಾಜಕೀಯ ಕೋಮು ಭಾವನೆ ಕೆರಳಿಸುವ ಎಲ್ಲಾ ಸಂಘಟನೆಗಳನ್ನ ನಿಷೇಧಿಸಿ: ಎಂ.ಬಿ ಪಾಟೀಲ್ ಆಗ್ರಹ

ಕೋಮು ಭಾವನೆ ಕೆರಳಿಸುವ ಎಲ್ಲಾ ಸಂಘಟನೆಗಳನ್ನ ನಿಷೇಧಿಸಿ: ಎಂ.ಬಿ ಪಾಟೀಲ್ ಆಗ್ರಹ

0

ವಿಜಯಪುರ(Vijayapura): ಕೋಮುಭಾವನೆ ಕೆರಳಿಸುವ  ಎಲ್ಲಾ ಸಂಘಟನೆಗಳನ್ನ ನಿಷೇಧಿಸಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್, ಆರ್ ಎಸ್ ಎಸ್ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿಲ್ಲ ಆರ್ ಎಸ್ ಎಸ್  ಬ್ರಿಟೀಷರ ಏಜೆಂಟಾಗಿದ್ದು ಜಗತ್ತಿಗೆ ಗೊತ್ತಿದೆ.  ಜನರಲ್ಲಿ ಕೋಮುಭಾವನೆ ಬಿತ್ತು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.  ರಾಜ್ಯದ ಜನರಿಗೆ ಸ್ವಲ್ಪ ದಿನದಲ್ಲಿ ಗೊತ್ತಾಗುತ್ತೆ.  ಕೋಮುಭಾವನೆ ಕೆರಳಿಸುವ ಸಂಘಟನೆಗಳನ್ನ ನಿಷೇಧಿಸಿ. ಆರ್ ಎಸ್ ಎಸ್ ವಿಶ್ವ ಹಿಂದೂಪರಿಷತ್ ಬಜರಂಗ ದಳ, ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳನ್ನೂ ನಿಷೇಧಿಸಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅವಧಿಯಲ್ಲಿನ ಭ್ರಷ್ಟಾಚಾರ ತೆರೆದಿಡುತ್ತೇವೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಟಾಂಗ್ ಕೊಟ್ಟ ಎಂ.ಬಿ ಪಾಟೀಲ್, ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ರೆ 3 ವರ್ಷ ಸುಮ್ಮನೇ ಏಕೆ ಕುಳಿತಿದ್ರು. ಸುಮ್ಮನೆ ಕೂತಿದ್ದೂ ಕೂಡ ಅಪರಾಧ ಅಲ್ಲವೇ ಎಂದು ಪ್ರಶ್ನಿಸಿದರು.

ಹಿಂದಿನ ಲೇಖನತಮ್ಮ ಹೃದಯದಲ್ಲಿರುವ ದ್ವೇಷದ ಮೇಲೆ ಬುಲ್ಡೋಜರ್ ಹರಿಸಿ: ರಾಹುಲ್ ಗಾಂಧಿ
ಮುಂದಿನ ಲೇಖನಆರೋಗ್ಯ ತಪಾಸಣೆಗೆ ಒಳಗಾಗಿ, ಶಕ್ತಿಧಾಮಕ್ಕೆ ಹಿಂತಿರುಗಿದ ನಟ ಶಿವರಾಜ್ ಕುಮಾರ್