ಆತ: ನಿಮ್ಮ ಮನೆಯ ಕನಸಿನರಮನೆ ಎಂದು ಏಕೆ ಕರೆದಿರಿ ?
ಈತ : ಏಕೆಂದರೆ, ನಾನು ಕನಸು ಕಂಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಖರ್ಚಾಯಿತು. ಅದನ್ನು ಕಟ್ಟಿಸೋಕೆ,….
***
ಮೂರ್ಖ ಸ್ನೇಹಿತರು ಹರಟುತಿದ್ದರು …
ಒಂದನೇ ಮೂರ್ಖ : ಅಮೆರಿಕದವರು ಚಂದ್ರನೊಂದಿಗೆ ಹೋಗಿ ಬಂದರು.
ಎರಡನೇಮೂರ್ಖ : ನಾನೇನು ಕಡಿಮೆ ನಾನು ಸೂರ್ಯನಲ್ಲಿ ಹೋಗಬಹುದು.
ಒಂದನೇ ಮೂರ್ಖ : ಹೇಗೆ ಸಾಧ್ಯ ಅಲ್ಲಿಗೆ ಹೋದರೆ ನಾವು ಸುಟ್ಟು ಹೋಗುವುದಿಲ್ಲವೇ ?
ಎರಡನೇಮೂರ್ಖ : ನಾನು ರಾತ್ರಿನೇ ಹೋಗಿ ಬಂದರಾಯ್ತು, ಹಗಲಲ್ಲಿ ಹೋಗದಿದ್ದರಾಯ್ತು ಅಷ್ಟೇ.
***
ಬಾಲು: ಸಾರ್, ನಿಮ್ಮಲ್ಲಿ ಪಾಸ್ ಪೋರ್ಟ್ ಸೈಜ್ ಫೋಟೋ ತೆಗೆಸಿದರೆ ಚಪ್ಪಲಿ ತನಕ ಕವರ್ ಆಗುತ್ತಾ?
ಫೋಟೋಗ್ರಾಫರ್ : ಕವರ್ ಆಗುತ್ತೆ. ಆದ್ರೆ ನಿಮ್ಮ ತಲೆನಾ ಚಪ್ಪಲಿ ಮೇಲೆ ಇಟ್ಕೊಂಡ್ರೆ ಮಾತ್ರ..
***
ಹೆಂಡತಿ ನಗುನಗುತ್ತಾ ಇದ್ದಾಗ ಗಂಡ ಮೆಲ್ಲಗೆ ಕೇಳಿದ…
ಗಂಡ : ಎಲ್ಲಾಸರಿ, ಆದರೆ ನನ್ನ ಬಳಗದಲ್ಲಿ ಯಾರು ನಿನಗೆ ಇಷ್ಟವಾಗಲ್ಲವಲ್ಲ, ಯಾಕೆ ಅಂತ.
ಹೆಂಡತಿ : ಯಾರು ಹೇಳಿದರು ಹಾಗಂತ ಹೆಂಡತಿ ಹೇಳಿದಳು. “ನಿಮ್ಮತ್ತೆನ ನನ್ನ ಅತ್ತೆಗಿಂತ ಹೆಚ್ಚಾಗಿ ಪ್ರೀತಿಸ್ತೀನಿ ಗೊತ್ತಾ..?”
***
ಕ್ಲರ್ಕ್ : ಪಾಪ ರಾಮುಗೆ ಪೂರ್ತಿ ಕಿವುಡ ಆವರಿಸಿದೆ. ಅವನಿಗೆ ಕೆಲಸ ಹೋಗುತ್ತೋ ಅಂತ ಚಿಂತೆ ಆಗಿದೆ.
ಗೆಳೆಯ : ಛೆ.. ಛೆ.. ಕೆಲಸ ಹೋಗುತ್ತೆ ಅಂತ ಯಾರು ಅಂದದ್ದು? ಅವನನ್ನ ದೂರಗಳ ವಿಭಾಗಕ್ಕೆ ವರ್ಗಾವಣೆ ಮಾಡುತ್ತಾರೆ ಅಷ್ಟೇ.














