ಮನೆ ಮನರಂಜನೆ ಪಾನ್ ಮಸಾಲ ಬ್ರಾಂಡ್ ಜಾಹೀರಾತು: ಅಕ್ಷಯ್ ಕುಮಾರ್ ಕ್ಷಮೆಯಾಚನೆ

ಪಾನ್ ಮಸಾಲ ಬ್ರಾಂಡ್ ಜಾಹೀರಾತು: ಅಕ್ಷಯ್ ಕುಮಾರ್ ಕ್ಷಮೆಯಾಚನೆ

0

ಮುಂಬೈ: ಪಾನ್ ಮಸಾಲ ಬ್ರಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗುರುವಾರ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಆ ಜಾಹೀರಾತಿನ ಒ‍ಪ್ಪಂದ ಕಡಿದುಕೊಳ್ಳುವುದಾಗಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ

ಎಂದಿಗೂ ನಾನು ತಂಬಾಕನ್ನು ಉತ್ತೇಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಹಳೆಯ ವಿಡಿಯೊವನ್ನು ಪೋಸ್ಟ್ ಮಾಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರು ಅಕ್ಷಯ್ ಕುಮಾರ್ ಅವರ ವಿರುದ್ಧ ತೀವ್ರ ಟೀಕೆಗೈದಿದ್ದರು. ಈ ಹಿನ್ನೆಲೆಯಲ್ಲಿ ‘ನನ್ನನ್ನು ಕ್ಷಮಿಸಿ’ ಎಂದು ಟ್ವಿಟರ್ ಪೋಸ್ಟ್ ಮೂಲಕ 54 ವರ್ಷದ ನಟ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.

ಅಕ್ಷಯ್ ಕುಮಾರ್ ಹೇಳಿರುವುದೇನು ?

‘ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳೇ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನನ್ನು ಆಳವಾಗಿ ಪ್ರಭಾವಿಸಿದೆ. ನಾನು ತಂಬಾಕನ್ನು ಎಂದಿಗೂ ಉತ್ತೇಜಿಸಿಲ್ಲ ಮತ್ತು ನಾನು ಜಾಹೀರಾತು ಮಾಡುತ್ತಿರುವ ಬ್ರಾಂಡ್ ಬಗೆಗಿನ ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ‘ವಿನಮ್ರತೆಯಿಂದ ನಾನು ಹಿಂದೆ ಸರಿಯುತ್ತೇನೆ. ನಾನು ಪಡೆದಿರುವ ಸಂಪೂರ್ಣ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ನೀಡಲು ನಿರ್ಧರಿಸಿದ್ದೇನೆ. ನನ್ನ ಒಪ್ಪಂದದ ಕಾನೂನು ಅವಧಿ ಮುಗಿಯುವವರೆಗೆ ಬ್ರ್ಯಾಂಡ್ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸಬಹುದು.’ನಾನು ಭವಿಷ್ಯದ ಆಯ್ಕೆಗಳನ್ನು ಮಾಡುವಾಗ ಅತ್ಯಂತ ಜಾಗರೂಕರಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಹಾರೈಕೆಗಳನ್ನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.