ಮನೆ ರಾಜ್ಯ ದಾವಣಗೆರೆ: ಜಾಲಿ ರೈಡ್ ಗೆ ಬಂದಿದ್ದ ಕೇರಳದ ಯುವಕರು ಅಪಘಾತದಲ್ಲಿ ಸಾವು

ದಾವಣಗೆರೆ: ಜಾಲಿ ರೈಡ್ ಗೆ ಬಂದಿದ್ದ ಕೇರಳದ ಯುವಕರು ಅಪಘಾತದಲ್ಲಿ ಸಾವು

0

ದಾವಣಗೆರೆ: ಜಾಲಿ ರೈಡ್’ಗೆ​ ಬಂದಿದ್ದ ಕೇರಳದ ಇಬ್ಬರು ಬೈಕ್ ಸವಾರರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ  ದಾವಣಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 54ರಲ್ಲಿ ನಡೆದಿದೆ.

ಕೇರಳ ಮೂಲದ ಅತುಲ್(25), ಋಷಿಕೇಶ್(24) ಮೃತ ದುರ್ದೈವಿಗಳು. ಎನ್ ಫೀಲ್ಡ್ ಹಿಮಾಲಯನ್ ಬೈಕ್ ​ನಲ್ಲಿ ಕೇರಳದಿಂದ ಬಂದಿದ್ದ ಯುವಕರು ದಾವಣಗೆರೆಯ ಎಸ್.ಎಸ್. ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಬ್ರಿಡ್ಜ್ ಬಳಿಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಬ್ರಿಡ್ಜ್​​​ ಮೇಲಿಂದ ಬೈಕ್​​ ಸವಾರರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಕಾರು ಹರಿದು ಇಬ್ಬರು ಬೈಕ್ ಸವಾರರ ಸಾವಾಗಿದೆ. ಇನ್ನು ರಸ್ತೆಯ ಮಧ್ಯೆ ಬಿದ್ದ ಬೈಕ್​ ಗೆ ಕಾರು ಡಿಕ್ಕಿಯಾಗಿದ್ದು ಕಾರು ಚಾಲಕನಿಗೆ ಸಣ್ಣಪುಟ್ಟಗಾಯಗಳಾಗಿವೆ. ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸ್ಥಳಕ್ಕೆ ಎಸ್​ ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.