ಮನೆ ಕ್ರೀಡೆ ಅಂತರರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

ಅಂತರರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

0

ಬೆಂಗಳೂರು(Bengaluru): ಕ್ರಿಕೆಟ್‌ನಿಂದ ಬಹುತೇಕ ದೂರ ಉಳಿದಿರುವ ಬ್ಯಾಟರ್‌ ಮುರಳಿ ವಿಜಯ್ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

38 ವರ್ಷದ ಅನುಭವಿ ಬಲಗೈ ಬ್ಯಾಟ್ಸ್ಮನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಮ್ಮ ನಿವೃತ್ತಿ ವಿಚಾರ ಹಂಚಿಕೊಂಡಿದ್ದಾರೆ.

61 ಟೆಸ್ಟ್‌’ಗಳು, 17 ಏಕದಿನ ಮತ್ತು 9 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಬಲಗೈ ಬ್ಯಾಟರ್ ಡಿಸೆಂಬರ್ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್‌’ನಲ್ಲಿ ಕೊನೆಯ ಬಾರಿಗೆ ದೇಶಕ್ಕಾಗಿ ಆಡಿದ್ದರು.

ಬಳಿಕ ಕಳಪೆ ಲಯದ ಕಾರಣ ಭಾರತ ತಂಡದಿಂದ ಹೊರಬಿದ್ದರು. ನಂತರ ಅವರಿಗೆ ಟೀಮ್ ಇಂಡಿಯಾದ ಕದ ತೆರೆಯಲೇ ಇಲ್ಲ. ವಯಸ್ಸಾಗಿದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶದ ಬಾಗಿಲನ್ನು ಬಿಸಿಸಿಐ ಮುಚ್ಚಿತ್ತು ಎಂದು ವಿಜಯ್ ಇತ್ತೀಚಿನ ಸಂದರ್ಶನ ಒಂದರಲ್ಲಿ ಅಸಮಾಧಾನ ತೋಡಿಕೊಂಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೂ ಸೂಪರ್ ಕಿಂಗ್ಸ್ ಪರ ಹಲವು ಆವೃತ್ತಿಗಳಲ್ಲಿ ಆಡಿದ್ದ ಮುರಳಿ ವಿಜಯ್, ತಾವು ಟೆಸ್ಟ್ ಮಾತ್ರವಲ್ಲ ಟಿ20 ಕ್ರಿಕೆಟ್’ನಲ್ಲೂ ಅಬ್ಬರಿಸುವ ಸಾಮರ್ಥ್ಯ ಹೊಂದಿರುವ ಸಂದೇಶ ರವಾನಿಸಿದ್ದಾರೆ.

ಐಪಿಎಲ್ ವೃತ್ತಿಬದುಕಿನಲ್ಲಿ ಆಡಿದ 106 ಐಪಿಎಲ್ ಪಂದ್ಯಗಳಲ್ಲಿ 121.87ರ ಸ್ಟ್ರೈಕ್ ರೇಟ್’ನೊಂದಿಗೆ 2619 ರನ್’ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಕೂಡ ಸೇರಿವೆ.

“ಬಿಸಿಸಿಐ, ಟಿಎನ್’ಸಿ, ಸಿಎಎಸ್’ಕೆ ಮತ್ತು ಚೆಂಪ್ಲಾಸ್ಸ್ ಸನ್ಮಾರ್ ನನಗೆ ನೀಡಿದ ಅವಕಾಶಗಳಿಗೆ ನಾನು ಆಭಾರಿಯಾಗಿದ್ದೇನೆ. ನನ್ನೆಲ್ಲಾ ಸಹಾ ಆಟಗಾರರಿಗೆ, ಕೋಚ್’ಗಳಿಗೆ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳು. ನಿಮ್ಮೆಲ್ಲರ ಜೊತೆಗೆ ಆಡುವ ಅವಕಾಶ ಸಿಕ್ಕಿದ್ದು ನನಗೆ ಲಭ್ಯವಾದ ಬಹುದೊಡ್ಡ ಗೌರವ. ನನ್ನ ಕನಸನ್ನು ನನಸನ್ನಾಗಿಸಿಕೊಳ್ಳಲು ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದ,” ಎಂದು ಮುರಳಿ ವಿಜಯ್ ತಮ್ಮ ನಿವೃತ್ತಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಹಿಂದಿನ ಲೇಖನದಾಭೋಲ್ಕರ್ ಹತ್ಯೆ: ತನಿಖೆ ಪೂರ್ಣಗೊಂಡಿದೆಯೇ ಎಂಬುದನ್ನು ತಿಳಿಸಲು ಸಿಬಿಐಗೆ ಸೂಚಿಸಿದ ಬಾಂಬೆ ಹೈಕೋರ್ಟ್
ಮುಂದಿನ ಲೇಖನರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ:  ಡಾ. ರಾಜೇಂದ್ರ ಕೆ ವಿ