ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರ ನಡುವೆ ಗಲಾಟೆ ನಡೆದಿದ್ದು, ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಹಿನಕಲ್ನ ನಾಯಕರ ಬೀದಿಯಲ್ಲಿ ನಡೆದಿದೆ.
ಹಿನಕಲ್ ನ ದಾಸನಾಯಕ ಎಂಬುವರ ಪತ್ನಿ ಸಾಕಮ್ಮ (50) ಕೊಲೆಯಾದ ಮಹಿಳೆಯಾಗಿದ್ದಾರೆ. ಮನು, ಗೋವಿಂದನಾಯಕ, ಕಿರಣ್, ಲಕ್ಷ್ಮೀ ಬಂಧಿತ ಆರೋಪಿಗಳು ಮತ್ತೊಬ್ಬ ಮನೋಜ್ ಎಂಬಾತ ಪರಾರಿಯಾಗಿದ್ದಾನೆ.
ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಚಾಕುವಿನಿಂದ ಕುತ್ತಿಗೆ ಕೊಯ್ದು ಸಾಕಮ್ಮನನ್ನ ಕೊಲೆ ಮಾಡಲಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.