ಮನೆ ರಾಜ್ಯ ಬೆಂಗಳೂರು: ಹಿಟ್ ಆ್ಯಂಡ್ ರನ್ ​​ಗೆ ಓರ್ವ ಬೈಕ್ ಸವಾರ ಸಾವು

ಬೆಂಗಳೂರು: ಹಿಟ್ ಆ್ಯಂಡ್ ರನ್ ​​ಗೆ ಓರ್ವ ಬೈಕ್ ಸವಾರ ಸಾವು

0

ಬೆಂಗಳೂರು: ಹಿಟ್​ ಆ್ಯಂಡ್ ರನ್ ​​ಗೆ ಓರ್ವ ಬೈಕ್​ ಸವಾರ ಬಲಿಯಾಗಿರುವ ಘಟನೆ ಬೆಂಗಳೂರಿನ ಗಾಣಕಲ್ ರಸ್ತೆಯಲ್ಲಿ ಇಂದು ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ನಡೆದಿದೆ.

 KA 53 MH 9090 ಸಂಖ್ಯೆಯ ಕಾರು ಚಾಲಕನಿಂದ ಹಿಟ್​​ ಆ್ಯಂಡ್ ರನ್ ನಡೆದಿದೆ.

ಅಜಾಗರೂಕತೆ ಹಾಗೂ ವೇಗವಾಗಿ ಬಂದ ಕಾರ್ ​ನಿಂದ ಬೈಕ್​​ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಿಕ್ಕೇಗೌಡನಪಾಳ್ಯದಿಂದ ಉತ್ತರಹಳ್ಳಿ ಕಡೆಗೆ ವೇಗವಾಗಿ ಕಾರು ವೇಗವಾಗಿ ಚಲಿಸಿದೆ.

ಕಾರು ಡಿಕ್ಕಿ ಪರಿಣಾಮ ಬೈಕ್​ ಸವಾರ ಅಜಯ್ ಕುಮಾರ್ ತೀವ್ರ ಗಾಯಗಳಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದಾನೆ.

 ಸ್ಥಳಕ್ಕೆ ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಾಲಕನಿಗಾಗಿ ಶೋಧ ನಡೆದಿದೆ.