ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾವನ್ನು ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಂಸ್ಥೆಯ ಸಂಸ್ಥಾಪಕ ಯಶ್ ರಾಜ್ ಅವರ ಜನ್ಮದಿನದ ಪ್ರಯುಕ್ತ ಇಂದು (ಸೆಪ್ಟೆಂಬರ್ 27) ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.
ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ‘ಟೈಗರ್ 3’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರು ಜೋಡಿಯಾಗಿ ನಟಿಸಿದ್ದಾರೆ. ಇಮ್ರಾನ್ ಹಷ್ಮಿ ಅವರು ಖಳನಾಯಕನ ಪಾತ್ರ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಚಿತ್ರ ಬಿಡಗಡೆ ಆಗಲಿದೆ. ಈಗ ಟೀಸರ್ ಸದ್ದು ಮಾಡುತ್ತಿದೆ. ಇದರಲ್ಲಿ ಟೈಗರ್ ಒಂದು ಮೆಸೇಜ್ ನೀಡಿದ್ದಾನೆ.
‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’ ಸಿನಿಮಾದ ಮುಂದುವರಿದ ಭಾಗವಾಗಿ ‘ಟೈಗರ್ 3’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾದ ಕಥೆ ಏನು ಎಂಬುದನ್ನು ಈ ಟೀಸರ್ನಲ್ಲಿ ವಿವರಿಸಲಾಗಿದೆ. ‘20 ವರ್ಷ ನಾನು ಭಾರತಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ಅದರ ಬದಲಿಗೆ ನಾನು ಏನನ್ನೂ ಕೇಳಿಲ್ಲ. ಇಂದು ಕೇಳುತ್ತಿದ್ದೇನೆ. ಟೈಗರ್ ನಿಮ್ಮ ಶತ್ರು ಎಂದು ಹೇಳಲಾಗುತ್ತಿದೆ. ಟೈಗರ್ ಒಬ್ಬ ದ್ರೋಹಿ ಅಂತ ಹೇಳಲಾಗುತ್ತಿದೆ. 20 ವರ್ಷಗಳ ಸೇವೆಯ ನಂತರವೂ ನಾನು ಭಾರತದಿಂದ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೇಳುತ್ತಿದ್ದೇನೆ’ ಎಂದು ಸಲ್ಮಾನ್ ಖಾನ್ ಹೇಳಿರುವ ಡೈಲಾಗ್ ಹೈಲೈಟ್ ಆಗಿದೆ.
ಈ ಬಾರಿ ಟೈಗರ್ ತನ್ನ ಕ್ಯಾರೆಕ್ಟರ್ ಏನು ಎಂಬುದನ್ನು ಸಾಬೀತು ಮಾಡಿಕೊಳ್ಳಲು ದೇಶದ ವಿರುದ್ಧವೇ ಹೋರಾಟಕ್ಕೆ ನಿಂತಂತಿದೆ. ‘ಬದುಕಿದ್ದರೆ ಮತ್ತೆ ನಿಮ್ಮೆ ಸೇವೆ ಮಾಡುತ್ತೇನೆ. ಇಲ್ಲದಿದ್ದರೆ ಜೈಹಿಂದ್’ ಎಂದು ಹೇಳುವ ಮೂಲಕ ಆತ ಯುದ್ಧ ಸಾರಿದ್ದಾನೆ. ಈ ಟೀಸರ್ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳ ಝಲಕ್ ತೋರಿಸಲಾಗಿದೆ. ‘ಎಲ್ಲಿಯವರೆಗೆ ಟೈಗರ್ ಸಾಯಲ್ಲವೋ, ಅಲ್ಲಿಯವರೆಗೆ ಸೋಲಲ್ಲ’ ಎಂದು ಸಲ್ಮಾನ್ ಖಾನ್ ಮಾಸ್ ಆಗಿ ಡೈಲಾಗ್ ಹೊಡೆದಿದ್ದಾರೆ.
ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ‘ಟೈಗರ್ 3’ ಸಿನಿಮಾ ರಿಲೀಸ್ ಆಗಲಿದೆ. ‘ಜವಾನ್’ ಮತ್ತು ‘ಪಠಾಣ್’ ರೀತಿ ಈ ಸಿನಿಮಾ ಕೂಡ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಾ ಎಂಬುದನ್ನು ಕಾದುನೋಡಬೇಕು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ಟೈಗರ್ 3’ ಟೀಸರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
ಹೆಚ್ಎಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ
ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ…
ದಸರಾ ಸಮಯದಲ್ಲಿ ನೆನೆಯಬೇಕಾದ ಸಮಾಧಿಗಳು
70 ವರ್ಷ ಮೇಲ್ಪಟ್ಟ ಹಿರಿಯ ವಯಸ್ಕರಿಗೂ ಲಭಿಸುತ್ತದೆ ಆಯುಷ್ಮಾನ್ ಭಾರತ್ ಯೋಜನೆ
ಹೇ ಬಾಲ್ಯವೇ ನೀ ಮತ್ತೊಮ್ಮೆ ಮಾರುಕಳಿಸು…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.