ಮನೆ ರಾಜ್ಯ ದರ್ಶನ್ ಅಭಿಮಾನಿಗಳಿಂದ ಬೆಂ-ಮೈ ಹೆದ್ದಾರಿ ತಡೆ: ಜೈನ್ ಸಮಾಜ, SDPI ವತಿಯಿಂದಲೂ ಪ್ರತಿಭಟನೆ

ದರ್ಶನ್ ಅಭಿಮಾನಿಗಳಿಂದ ಬೆಂ-ಮೈ ಹೆದ್ದಾರಿ ತಡೆ: ಜೈನ್ ಸಮಾಜ, SDPI ವತಿಯಿಂದಲೂ ಪ್ರತಿಭಟನೆ

0

ಮಂಡ್ಯ: ನಟ ದರ್ಶನ್ ಅಭಿಮಾನಿಗಳು ಕಾವೇರಿ ಹೋರಾಟಕ್ಕಿಳಿದಿದ್ದು, ಸಂಜಯ್ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ದರ್ಶನ್ ಸೇನಾ ಸಮಿತಿ ವತಿಯಿಂದ ಕಾವೇರಿಗಾಗಿ ಪ್ರತಿಭಟನೆ ನಡೆಸಿದ್ದು, ನಿಲ್ಲಿಸಿ ನಿಲ್ಲಿಸಿ ಕಾವೇರಿ ನಿಲ್ಲಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ತಕ್ಷಣವೇ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಜೈನ್ ಸಮಾಜ ಹಾಗೂ SDPI ವತಿಯಿಂದ ಬೆಂ-ಮೈ ಹೆದ್ದಾರಿ ತಡೆ

ಜೈನ್ ಸಮಾಜ ಹಾಗೂ SDPI ವತಿಯಿಂದ ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಖಂಡ ಕರ್ನಾಟಕ ಬಂದ್ ಬೆಂಬಲಿಸಿ ಬೈಕ್ ಜಾಥಾ ನಡೆಸಿ, ಮಾನವ ಸರಪಳಿ ಮೂಲಕ ಆಕ್ರೋಶ ಹೊರಹಾಕಿದ್ದಾರೆ.