ಮನೆ ಮನರಂಜನೆ ಅ.5 ರಂದು ‘ಲಿಯೋ’ ಚಿತ್ರದ  ಟ್ರೇಲರ್ ಬಿಡುಗಡೆ

ಅ.5 ರಂದು ‘ಲಿಯೋ’ ಚಿತ್ರದ  ಟ್ರೇಲರ್ ಬಿಡುಗಡೆ

0

ಕರ್ನಾಟಕ- ತಮಿಳುನಾಡು ನಡುವಿನ ಕಾವೇರಿ ನದಿ ನೀರು ವಿವಾದ ಈಗ ಎರಡು ಚಿತ್ರರಂಗಗಳ ಮೇಲೆ ಗಂಭೀರ ಪರಿಣಾಮ ಬೀರುವಂತೆ ಮಾಡುತ್ತಿದೆ. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ವಿರುದ್ಧ ಕನ್ನಡಪರ ಸಂಘಟನೆಗಳು, ರೈತ ಸಂಘಗಳು, ಚಿತ್ರರಂಗ ಸೇರಿದಂತೆ ಕರ್ನಾಟಕದ ಜನತೆ ಸಿಡಿದಿದ್ದಾರೆ.

ಈ ವಿವಾದಗಳ ನಡುವೆ ಬಹುನಿರೀಕ್ಷಿತ ಲಿಯೋ ಸಿನಿಮಾ ಲಿಯೋ ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ಚಿತ್ರತಂಡ ಘೋಷಿಸಲಾಗಿದೆ. ಈ ವಿಷಯವನ್ನು ಚಿತ್ರತಂಡ ತಮ್ಮ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ನಿಮ್ಮ ಆರ್ಡರ್ ತಯಾರಾಗುತ್ತಿದೆ ಲಿಯೋ ಟ್ರೇಲರ್ ದಾರಿಯಲ್ಲಿದೆ..! ನಿಮ್ಮ ಊಟವನ್ನು ಆನಂದಿಸಲು ಸಿದ್ಧರಾಗಿ. 7 ಸ್ಕ್ರೀನ್ ಸ್ಟುಡಿಯೋ ಈ ಅಕ್ಟೋಬರ್ 5 ರಂದು ಇದನ್ನು ನಿಮಗೆ ತಲುಪಿಸುತ್ತದೆ” ಎಂದು ಟ್ವೀಟ್ ಮಾಡಲಾಗಿದೆ. ಲಿಯೋ ಚಿತ್ರ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಚಿತ್ರ ಮಂದಿರಗಳಿಗೆ ಬಿಡುಗಡೆ ಯಾಗಲಿದೆ.

‘ಲಿಯೋ’ ಚಿತ್ರಕ್ಕೆ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಲೋಕೇಶ್, ರತ್ನ ಕುಮಾರ್ ಮತ್ತು ದೀರಜ್ ವೈದಿ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್, ತ್ರಿಶಾ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಪ್ರಿಯಾ ಆನಂದ್ ಮತ್ತು ಮನ್ಸೂರ್ ಅಲಿ ಖಾನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ಬಂಡವಾಳ ಹೂಡಿದ್ದರೇ, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.