ಮನೆ ದೇವರ ನಾಮ ಬೇರೆ ಏನು ಕೇಳಾಲಾರೆ

ಬೇರೆ ಏನು ಕೇಳಾಲಾರೆ

0

ಬೇರೆ ಏನು ಕೇಳಾಲಾರೆ ಸ್ವಾಮಿ

ಒಂದೇ ಒಂದು ಮಾತು ಹೇಳು ಸ್ವಾಮಿ ||

ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ || 2 ||

ಸಿರಿಯು ಬೇಕು ಎನ್ನಲಾರೆ

ಸುಖವ ನಾನು ಬೇಡಲಾರೆ

ಪದವಿ ಆಸೆ ಇಲ್ಲ ನನ್ನ ಸ್ವಾಮಿ || 2 ||  || ಬೇರೆ ||

ಭಕ್ತಿಬೇಕು ಎನ್ನಲಾರೆ

ಮುಕ್ತಿಯನ್ನು ಕೇಳಲಾರೆ

ಬೇರೆ ನೋರು ಆಸೆ ಇಲ್ಲ ಸ್ವಾಮಿ || 2 ||  ||ಬೇರೆ ||

ಗಿರಿಯಲಿರುವ ಹರಿವ ನದಿಗೆ

ಕಡಲ ಮೋಹ ಇರುವ ಹಾಗೆ

ಎಲ್ಲೋ ಇರುವ ನನ್ನ ಮನಕೆ ಇಂದು ||

ನಿನ್ನ ಕಾಣೋ ತವಕ ಏಕೇ ಬಂತು || ಬೇರೆ ||