ಮನೆ ಸುದ್ದಿ ಜಾಲ ಗಂಡಬೇಡ, ಕೋಟಿ ಕೋಟಿ ಹಣವೇ ಬೇಕು!ಹಾದಿ ತಪ್ಪಿದ ಹೆಂಡತಿ ಮಾಡಿದ ಭಯಾನಕ ಪ್ಲಾನ್ ಕೇಳಿದ್ರೆ ಬೆಚ್ಚಿಬೀಳ್ತೀರಾ!

ಗಂಡಬೇಡ, ಕೋಟಿ ಕೋಟಿ ಹಣವೇ ಬೇಕು!ಹಾದಿ ತಪ್ಪಿದ ಹೆಂಡತಿ ಮಾಡಿದ ಭಯಾನಕ ಪ್ಲಾನ್ ಕೇಳಿದ್ರೆ ಬೆಚ್ಚಿಬೀಳ್ತೀರಾ!

0

ಹರಿಯಾಣ : ಹರಿಯಾಣದಲ್ಲಿ ನಡೆದ ಭಯಾನಕ ಘಟನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪತ್ನಿಯೊಬ್ಬಳು ತನ್ನ ಗಂಡನನ್ನೇ ಕೊಲ್ಲಲು ಸಂಚು ರೂಪಿಸಿದ್ದು, ಇದೀಗ ಪೊಲೀಸರ ಬಂಧನಕ್ಕೊಳಗಾಗಿದ್ದಾಳೆ. ಮೊದಲಿಗೆ ಈ ಘಟನೆ ಸಾಮಾನ್ಯ ರಸ್ತೆ ಅಪಘಾತವೆಂದು ತೋರಿಸಲಾಗಿತ್ತು. ಆದರೆ ಪೊಲೀಸರ ತನಿಖೆಯ ಬಳಿಕ ಅದರ ಹಿಂದೆ ಭಯಾನಕ ಸತ್ಯ ಬಯಲಾಗಿದೆ.

ಈ ಘಟನೆ ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯಲ್ಲಿ ನಡೆದಿದೆ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವ ಮಾತಿಗೆ ಉದಾಹರಣೆಯಂತೆ, ಪತ್ನಿಯೊಬ್ಬಳು ಕೋಟ್ಯಾಧಿಪತಿ ಆಗುವ ಆಸೆಯಿಂದ ತನ್ನ ಗಂಡನ ಜೀವ ತೆಗೆದುಕೊಳ್ಳಲು ಸಂಚು ರೂಪಿಸಿದ್ದಾಳೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ವಿಮಾ ಹಣ ಮತ್ತು ಇತರ ಆರ್ಥಿಕ ಲಾಭಗಳಿಗಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ ಪ್ರಕಾರ, ಏಪ್ರಿಲ್ 19ರಂದು ತಿವಾಲಾ ಗ್ರಾಮದ ಬಳಿ ಸ್ಕೂಟರ್‌ಗೆ ಹಿಂದಿನಿಂದ ವಾಹನ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಈ ಅಪಘಾತದಲ್ಲಿ ಪ್ರದೀಪ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಆರಂಭದಲ್ಲಿ ಪ್ರಕರಣವನ್ನು ಸಾಮಾನ್ಯ ಅಪಘಾತವೆಂದು ದಾಖಲಿಸಲಾಗಿತ್ತು. ಆದರೆ ಸ್ಕೂಟರ್‌ಗೆ ಹೆಚ್ಚಿನ ಹಾನಿಯಾಗದಿದ್ದರೂ ಪ್ರದೀಪ್‌ಗೆ ತೀವ್ರ ಗಾಯಗಳಾಗಿರುವುದು ಕುಟುಂಬದವರಿಗೆ ಅನುಮಾನ ಹುಟ್ಟಿಸಿತು.

ಏಪ್ರಿಲ್ 24ರಂದು ಪ್ರದೀಪ್ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಹೊಸ ತಿರುವು ಪಡೆದಿತು. ಅವರ ಅನುಮಾನಗಳ ಆಧಾರದಲ್ಲಿ ಪೊಲೀಸರು ತನಿಖೆಯನ್ನು ಗಂಭೀರವಾಗಿ ಮುಂದುವರಿಸಿದರು. ತಾಂತ್ರಿಕ ಸಾಕ್ಷ್ಯಗಳು, ಮೊಬೈಲ್ ಕರೆ ವಿವರಗಳು ಹಾಗೂ ಬ್ಯಾಂಕ್ ವಹಿವಾಟುಗಳ ಪರಿಶೀಲನೆ ವೇಳೆ ಹಲವಾರು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು.

ಪೊಲೀಸರ ತನಿಖೆಯಲ್ಲಿ ಬಹಿರಂಗವಾದಂತೆ, ಆರೋಪಿ ಪತ್ನಿ 2026ರ ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ಗಂಡ ಪ್ರದೀಪ್ ಅವರ ಹೆಸರಿನಲ್ಲಿ ತಲಾ ₹60 ಲಕ್ಷ ಮೌಲ್ಯದ ಎರಡು ಜೀವ ವಿಮಾ ಪಾಲಿಸಿಗಳನ್ನು ಮಾಡಿಸಿದ್ದಳು. ಎರಡೂ ಪಾಲಿಸಿಗಳಲ್ಲಿ ತಾನೇ ನಾಮಿನಿಯಾಗಿ ಹೆಸರು ಸೇರಿಸಿಕೊಂಡಿದ್ದಳು. ಜೊತೆಗೆ ಗಂಡನ ಆಸ್ತಿ, ಪೂರ್ವಜರ ಭೂಮಿ ಹಾಗೂ ಇತರ ಆರ್ಥಿಕ ಲಾಭಗಳ ಮೇಲೆ ಕಣ್ಣಿಟ್ಟಿದ್ದಳು. ಒಟ್ಟಿನಲ್ಲಿ ಸುಮಾರು ₹2 ಕೋಟಿ ಲಾಭ ಪಡೆಯುವ ಉದ್ದೇಶದಿಂದಲೇ ಈ ಕೊಲೆ ಸಂಚು ರೂಪಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಆಕೆ ಗಂಡನ ಹಣದಿಂದ ಒಂದು ಬೈಕ್ ಖರೀದಿಸಿ ತನ್ನ ಪ್ರೇಮಿ ಮುಖೇಶ್‌ಗೆ ನೀಡಿದ್ದಳು. ಅಪಘಾತದ ನಾಟಕ ಮಾಡಲು ಈ ಬೈಕ್ ಹಾಗೂ ಇತರ ವಾಹನಗಳನ್ನು ಬಳಸಲಾಗಿದೆ. ಆರೋಪಿಗಳು ಪ್ರದೀಪ್‌ನ್ನು ಗುರಿಯಾಗಿಸಿಕೊಂಡು ಡಿಕ್ಕಿ ಹೊಡೆದು ಕೊಲೆ ಮಾಡಿ, ಅದನ್ನು ಅಪಘಾತದಂತೆ ತೋರಿಸಲು ಯತ್ನಿಸಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಪತ್ನಿಯ ಜೊತೆಗೆ ಬಾದಲ್ ನಿವಾಸಿ ಮುಖೇಶ್, ಜಸ್ಬೀರ್ ಅಲಿಯಾಸ್ ಮಾಂಟಿ, ರವಿ ಸಾಂಗ್ವಾನ್ ಹಾಗೂ ಅಕ್ಷಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆಯಿಂದ iPhone 13 ಹಾಗೂ ಸಿಮ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇತರ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಪೊಲೀಸರ ಪ್ರಕಾರ, ಈ ಪ್ರಕರಣದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳು ಸಾಕಷ್ಟು ದೊರೆತಿದ್ದು, ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆ ಆಗುವಂತೆ ಬಲವಾದ ಚಾರ್ಜ್‌ಶೀಟ್ ಸಿದ್ಧಪಡಿಸಲಾಗುತ್ತಿದೆ.