ರಜನಿ ಅಭಿನಯಿಸಲಿರುವ 170ನೇ ಸಿನಿಮಾದಿಂದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ ‘ತಲೈವರ್ 170’ ಎಂದು ಕರೆಯಲಾಗುತ್ತಿದೆ. ಅಮಿತಾಭ್ ಬಚ್ಚನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.
ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ‘ತಲೈವರ್ 170’ ಸಿನಿಮಾ ಮೂಡಿಬರುತ್ತಿದೆ. ‘ಜೈ ಭೀಮ್’ ಸಿನಿಮಾ ಖ್ಯಾತಿಯ ಟಿಜೆ ಜ್ಞಾನವೇಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಗಮನ ಸೆಳೆಯುತ್ತಿದೆ. ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಮಾತ್ರವಲ್ಲದೇ ರಾಣಾ ದಗ್ಗುಬಾಟಿ, ಫಹಾದ್ ಪಾಸಿಲ್, ಮಂಜು ವಾರಿಯರ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್ ಕಡೆಯಿಂದ ಎಲ್ಲ ಕಲಾವಿದರ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು. ಕೊನೆಯದಾಗಿ ರಜನಿಕಾಂತ್ ಅವರ ಲುಕ್ ಬಹಿರಂಗ ಆಗಿದೆ. ಬ್ಲಾಕ್ ಆ್ಯಂಡ್ ವೈಟ್ ಥೀಮ್ನಲ್ಲಿ ಈ ಪೋಸ್ಟರ್ ವಿನ್ಯಾಸಗೊಂಡಿದೆ.
‘ಲೈಟ್ಸ್, ಕ್ಯಾಮರಾ, ಕ್ಲ್ಯಾಪ್ ಆ್ಯಂಡ್ ಆ್ಯಕ್ಷನ್. ರಜನಿಕಾಂತ್ ಜೊತೆ ಇಡೀ ತಂಡ ಸಿದ್ಧವಾಗಿದೆ. ಇದು ಆ್ಯಕ್ಷನ್ ಮೆರೆಯುವ ಸಮಯ. ಶೂಟಿಂಗ್ ಶುರುವಾದ ಬಳಿಕ ಹೆಚ್ಚು ಅಪ್ಡೇಟ್ ನೀಡುತ್ತೇವೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಏನೂ ಗೊತ್ತಿಲ್ಲ…
ಭ್ರಷ್ಟಾಚಾರದ ಪೆನ್ ಡ್ರೈವ್ ನಿಮಗೆ ಕೊಡುತ್ತೇನೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ತಾಕತ್ತು ಇದೆಯಾ..?
E ಪಾಸ್ ಕಡ್ಡಾಯ
ಆರು ಮರಿಗಳಿಗೆ ಜನ್ಮ ನೀಡಿದ ಚಾರ್ಲಿ
ಚುನಾವಣೆಯಲ್ಲಿ "ಕೈ" ಅಭ್ಯರ್ಥಿಯ ಗಿಫ್ಟ್ ಬಾಕ್ಸ್ ಸೀಜ್
ಗಿಫ್ಟ್ "ಪೊಲಿಟಿಕ್ಸ್"
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.