ಮನೆ ಮನರಂಜನೆ ‘ಲಿಯೋʼ ಟ್ರೇಲರ್‌ ಹೇಗಿದೆ ಗೊತ್ತಾ ?

‘ಲಿಯೋʼ ಟ್ರೇಲರ್‌ ಹೇಗಿದೆ ಗೊತ್ತಾ ?

0

ಚೆನ್ನೈ: ದಳಪತಿ ವಿಜಯ್‌ ಅವರ ಅಭಿಮಾನಿಗಳು ಕಾತರದಿಂದ ʼಲಿಯೋʼ ಟ್ರೇಲರ್‌ ರಿಲೀಸ್‌ ಆಗಿದೆ.

ಲೋಕೇಶ್‌ ಕನಕರಾಜ್ – ‌ ದಳಪತಿ ವಿಜಯ್‌ ಅವರ ʼಲಿಯೋʼ ಸಟ್ಟೇರಿದ ದಿನದಂದಲೇ ಸದ್ದು ಮಾಡಿತ್ತು. ಮೊದಲಿಗೆ ಸಿನಿಮಾದಲ್ಲಿನ ಪಾತ್ರವರ್ಗ ಕೂಡ ಸುದ್ದಿಯಾಗಿತ್ತು. ತ್ರಿಶಾ ಅವರು 14 ವರ್ಷದ ಬಳಿಕ ದಳಪತಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್‌ ದತ್‌ ಅವರು  “ಆ್ಯಂಟನಿ‌ ದಾಸ್”ಆಗಿ ಮಿಂಚಲಿದ್ದಾರೆ. ಇನ್ನು ರಗಡ್‌ ಅವತಾರದ ʼಹೆರಾಲ್ಡ್‌ ದಾಸ್ʼ ನಾಗಿ ಅರ್ಜುನ್‌ ಸರ್ಜಾ ಕಾಣಿಸಿಕೊಳ್ಳಲಿದ್ದಾರೆ.

ಭಾಷೆಯಲ್ಲೂ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿ ಕುತೂಹಲ ಹೆಚ್ಚಿಸಿತ್ತು.

ಆ ಮೂಲಕ ಸಿನಿಮಾ ಒಂದು ರೀತಿಯಲ್ಲಿ ಪ್ರಚಾರದಿಂದಲೇ ಸದ್ದು ಮಾಡಿದೆ. ಆಡಿಯೋ ರಿಲೀಸ್‌ ಕಾರ್ಯಕ್ರಮ ರದ್ದು ಮಾಡಿದ್ದರಿಂದ ವಿಜಯ್‌ ಫ್ಯಾನ್ಸ್‌ ಗಳು ಭಾರೀ ನಿರಾಶರಾಗಿದ್ದರು. ಈಗಾಗಲೇ ಸಿನಿಮಾಕ್ಕೆ ʼಯುಎʼ ಸರ್ಟಿಫಿಕೇಟ್‌ ನೀಡಲಾಗಿದ್ದು, ಸಿನಿಮಾವನ್ನು ಬಿಗ್‌ ಸ್ಕ್ರೀನ್‌ ನಲ್ಲಿ ನೋಡಲು ಫ್ಯಾನ್ಸ್‌ ಗಳು ಕಾಯುತ್ತಿದ್ದಾರೆ.

ಇದೀಗ ʼಲಿಯೋʼ ಟ್ರೇಲರ್‌ ರಿಲೀಸ್‌ ಆಗಿದೆ. ಎಂದಿನಂತೆ ವಿಜಯ್‌ ಫ್ಯಾನ್ಸ್‌ ಮೆಚ್ಚುವ ಆ ಝಲಕ್‌ ʼಲಿಯೋʼದಲ್ಲೂ ತೋರಿಸಲಾಗಿದೆ.  ಗ್ಯಾಂಗ್‌ ಸ್ಟರ್‌ ಮೇಲೆ ಗನ್‌ ಫೈಯರ್‌ ಮಾಡುವ ಪಾರ್ಥಿ(ವಿಜಯ್)‌ ಆ ಬಳಿಕ ಆ ಗ್ಯಾಂಗ್‌ ಆತನ ಫ್ಯಾಮಿಲಿ ಹಿಂದೆ ಹೋಗಿ ರಿವೆಂಜ್‌ ತೆಗೆದುಕೊಳ್ಳಯವ್‌ ಕಥಾಹಂದರದ ಝಲಕ್‌ ನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ಸಂಜಯ್‌ ದತ್‌, ಅರ್ಜನ್‌ ಸರ್ಜಾ ಗ್ಯಾಂಗ್‌ ಸ್ಟರ್‌ ಗಳಾಗಿ ಮಿಂಚಿದ್ದಾರೆ. ಶತ್ರುಗಳನ್ನು ಹುಡುಕಿಕೊಂಡು ಹೋಗಿ ಹೊಡೆಯುವವ ದೃಶ್ಯಗಳನ್ನು ಬಿಜಿಎಂ ಹಿನ್ನೆಲೆ ರೋಚಕವಾಗಿ ತೋರಿಸಲಾಗಿದೆ. ಕುಟುಂಬದ ರಕ್ಷಕನಾಗಲು ಆಯುಧ ಹಿಡಿಯುವ ನಟೋರಿಯಸ್‌ʼ ಲಿಯೋʼ ಇಲ್ಲಿದ್ದಾನೆ.

ಲಿಯೋʼ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್‌ ಅವರು ಮ್ಯೂಸಿಕ್ ನೀಡಿದ್ದು, ಸಂಜಯ್‌ ದತ್‌ ,ಅರ್ಜುನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದೇ ಅಕ್ಟೋಬರ್‌ 19 ರಂದು ಸಿನಿಮಾ ತೆರೆಗೆ ಬರಲಿದೆ.