ಮನೆ ರಾಷ್ಟ್ರೀಯ ಕೋವಿಡ್‌: ದೆಹಲಿಯಲ್ಲಿ 1,011 ಪಾಸಿಟಿವ್‌ ಕೇಸ್‌

ಕೋವಿಡ್‌: ದೆಹಲಿಯಲ್ಲಿ 1,011 ಪಾಸಿಟಿವ್‌ ಕೇಸ್‌

0

ನವದೆಹಲಿ (Newdelhi)-ದೇಶದ ರಾಜಧಾನಿ ದೆಹಲಿಯಲ್ಲಿ ಸೋಮವಾರ ಹೊಸದಾಗಿ 1,011 ಕೊರೊನಾ (Corona) ಪ್ರಕರಣಗಳು ವರದಿಯಾಗಿವೆ.

ಇದರಿಂದ ದೆಹಲಿಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 18,75,887ಕ್ಕೆ ಏರಿದೆ. ಪಾಸಿಟಿವಿಟಿ ದರ ಶೇಕಡ 6.42ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಿಂದ ತಿಳಿದುಬಂದಿದೆ.

ಸೋಂಕಿನಿಂದ ಓರ್ವರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 26,170ಕ್ಕೆ ಜಿಗಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,168ರಷ್ಟಿದೆ. ರಾಜಧಾನಿಯಲ್ಲಿ 15,642 ಕೋವಿಡ್ ಟೆಸ್ಟ್ ಮಾಡಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲಿ ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಭಾನುವಾರ 1,083 ಪ್ರಕರಣಗಳು ವರದಿಯಾಗಿದ್ದವು. ಪಾಸಿಟಿವಿಟಿ ದರ ಶೇ.4.48 ರಷ್ಟಿತ್ತು.