ಮನೆ ಮನರಂಜನೆ ನ.24ರಂದು ‘ಶುಗರ್‌ ಫ್ಯಾಕ್ಟರಿ’ ಸಿನಿಮಾ ಬಿಡುಗಡೆ

ನ.24ರಂದು ‘ಶುಗರ್‌ ಫ್ಯಾಕ್ಟರಿ’ ಸಿನಿಮಾ ಬಿಡುಗಡೆ

0

2021ರಲ್ಲಿ ಸೆಟ್ಟೇರಿದ್ದ ನಟ ಡಾರ್ಲಿಂಗ್‌ ಕೃಷ್ಣ ನಟನೆಯ ‘ಶುಗರ್‌ ಫ್ಯಾಕ್ಟರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೇ ನ.24ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಪ್ರಚಾರ ಆರಂಭಿಸಿರುವ ಚಿತ್ರತಂಡ ‘ಜಹಾಪನಾ’ ಎಂಬ ಹಾಡು ಬಿಡುಗಡೆ ಮಾಡಿದೆ.

ದೀಪಕ್ ಅರಸ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಜಯಂತ ಕಾಯ್ಕಿಣಿ ಅವರು ‘ಜಹಾಪನಾ’ ಎಂಬ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಇದಕ್ಕೆ ಧ್ವನಿಯಾಗಿದ್ದಾರೆ.

ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೋ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ ಸಿನಿಜರ್ನಿಯಲ್ಲೇ ಬಿಗ್ ಬಜೆಟ್ ಚಿತ್ರವೆಂದು ಕರೆಸಿಕೊಳ್ಳುತ್ತಿರುವ ಈ ಸಿನಿಮಾದ ಚಿತ್ರೀಕರಣ ಬೆಂಗಳೂರು ಮತ್ತು ಗೋವಾದಲ್ಲಿ ನಡೆದಿದೆ.

ಆರ್. ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೋ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ನಟಿಸಿದ್ದಾರೆ. ಅದ್ವಿತಿ ಈ ಚಿತ್ರದಲ್ಲಿ ಈವೆಂಟ್‌ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ‘ಲವ್ ಮಾಕ್ಟೇಲ್’ ಅಭಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.