ಮನೆ ಕ್ರೀಡೆ ಏಕದಿನ ವಿಶ್ವಕಪ್’ನ: ಅಫ್ಘಾನಿಸ್ತಾನ್ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ ಜಯ 

ಏಕದಿನ ವಿಶ್ವಕಪ್’ನ: ಅಫ್ಘಾನಿಸ್ತಾನ್ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ ಜಯ 

0

ಚೆನ್ನೈ (ತಮಿಳುನಾಡು): ಅಫ್ಘಾನಿಸ್ತಾನ ತಂಡ ಇಂದು ನ್ಯೂಜಿಲೆಂಡ್ ವಿರುದ್ಧ 149 ರನ್ ಗಳಿಂದ ಸೋಲು ಕಂಡಿದೆ. ಮಿಚೆಲ್ ಸ್ಯಾಂಟ್ನರ್ ಮತ್ತು ಲಾಕಿ ಫರ್ಗುಸನ್ ಬಿಗು ದಾಳಿಗೆ ನಲುಗಿದ ಅಫ್ಘನ್ ತಂಡ 34.4 ಓವರ್ ಗಳಿಗೆ 139 ರನ್ ಗಳಿಸಿ ಸರ್ವಪತನ ಕಂಡಿತು.

ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್ ಗಳಲ್ಲಿ6 ವಿಕೆಟ್ ನಷ್ಟಕ್ಕೆ 288 ರನ್ ಕಲೆಹಾಕಿತು.

ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 34.4 ಓವರ್ ಗಳಲ್ಲಿ ಕೇವಲ 139 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ನ್ಯೂಝಿಲೆಂಡ್ ತಂಡವು 149 ರನ್ ಗಳ ಗೆಲುವು ದಾಖಲಿಸಿದೆ.

ನ್ಯೂಝಿಲೆಂಡ್ ತಂಡದ ಪರ ಲಾಕಿ ಫರ್ಗುಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 3, ವಿಕೆಟ್ ಬೋಲ್ಟ್ ಎರಡು ಹಾಗೂ ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ ಒಂದೊಂದು ವಿಕೆಟ್ ಪಡೆದರು.

 71 ರನ್ ಗಳ ಆಸರೆಯ ಇನ್ನಿಂಗ್ಸ್ ಕಟ್ಟಿದ ಗ್ಲೆನ್ ಫಿಲಿಫ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.