ಮನೆ ಮನರಂಜನೆ “ಮನ್‌ ರೇ’ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟ ಗಾಯಕಿ ಐಶ್ವರ್ಯಾ ರಂಗರಾಜನ್‌

“ಮನ್‌ ರೇ’ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟ ಗಾಯಕಿ ಐಶ್ವರ್ಯಾ ರಂಗರಾಜನ್‌

0

ಸಂಗೀತ ಲೋಕ ಮತ್ತು ಕನ್ನಡ ಕಿರುತೆರೆಯಲ್ಲಿ ಗಾಯಕಿಯಾಗಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದ ಐಶ್ವರ್ಯಾ ರಂಗರಾಜನ್‌ ಈಗ “ಮನ್‌ ರೇ’ ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಹಿರಿತೆರೆಗೆ ಅಡಿಯಿಡುತ್ತಿದ್ದಾರೆ.

“ಮನ್‌ ರೇ’ ಸಿನಿಮಾದಲ್ಲಿ ಅಜಯ್‌ ರಾಜ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಅಜಯ್‌ ರಾಜ್‌ ಗೆ ಜೋಡಿಯಾಗಲಿ ರುವ ಐಶ್ವರ್ಯಾ ರಂಗರಾಜನ್‌ ಸಿನಿಮಾದಲ್ಲಿ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಸದ್ದಿಲ್ಲದೆ “ಮನ್‌ ರೇ’ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ “ಮನ್‌ ರೇ’ ಸಿನಿಮಾದ ಫ‌ಸ್ಟ್‌ಲುಕ್‌ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಯಿತು. “ಮನ್‌ ರೇ’ ಔಟ್‌ ಆ್ಯಂಡ್‌ ಔಟ್‌ ಸೈಕಾಲಜಿಕಲ್‌ ಥ್ರಿಲ್ಲರ್‌ ಶೈಲಿಯ ಸಿನಿಮಾವಾಗಿದ್ದು, ಮನಸ್ಸಿನ ಎಕ್ಸ್‌ ರೇ ಎಂಬುದನ್ನು ಕ್ಯಾಚಿಯಾಗಿ “ಮನ್‌ ರೇ’ ಎಂದು ಟೈಟಲ್‌ ಆಗಿ ಸಿನಿಮಾಕ್ಕೆ ಇಡಲಾಗಿದೆ.

ಭ್ರಮಲೋಕದಲ್ಲಿ ಬದುಕುವ ಹುಡುಗನೊಬ್ಬನ ಜೊತೆ ವಾಸ್ತವದಲ್ಲಿರುವವರು ಏನೇನು ಸಮಸ್ಯೆ ಎದುರಿಸುತ್ತಾರೆ ಎಂಬುದರ ಸುತ್ತ “ಮನ್‌ ರೇ’ ಸಿನಿಮಾದ ಕಥೆ ನಡೆಯುತ್ತದೆ. ಸುಮಾರು 8-9 ವರ್ಷಗಳಿಂದ ಮನಸ್ಸಿನಲ್ಲಿದ್ದ ಕಥೆ ಈಗ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಜಾಗೃತ ಮತ್ತು ಅರೆ ಜಾಗೃತ ಮನಸ್ಸಿನ ಸುತ್ತ ಸಿನಿಮಾ ಸಾಗುತ್ತದೆ ಎಂದು “ಮನ್‌ ರೇ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಗುರು ಸಾವನ್‌ ವಿವರಣೆ ಕೊಡುತ್ತಾರೆ.

 “ಭೂಮಿಕಾ ಕ್ರಿಯೇಶನ್ಸ್‌’ ಬ್ಯಾನರಿನಲ್ಲಿ ರಾಜಣ್ಣ, ತಿಲಕ್‌ ರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ “ಮನ್‌ ರೇ’ ಸಿನಿಮಾದಲ್ಲಿ ಅಜಯ್‌ ರಾಜ್‌, ಐಶ್ವರ್ಯಾ ರಂಗರಾಜನ್‌ ಅವರೊಂದಿಗೆ ಪ್ರಮೋದ್‌ ಶೆಟ್ಟಿ, ರಜಿನಿ, ಅಮಿತ್‌, ಸೂರ್ಯ ಸಿದ್ದಾರ್ಥ್, ಶಮಾ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಮನ್‌ ರೇ’ ಸಿನಿಮಾದ ಹಾಡುಗಳಿಗೆ ಅನಿರುದ್ಧ್ ಶಾಸ್ತ್ರೀ ಸಂಗೀತ ಸಂಯೋಜಿಸುತ್ತದ್ದಾರೆ. ಚಿತ್ರಕ್ಕೆ ಆದಿ ಛಾಯಾಗ್ರಹಣವಿದೆ. ಇದೇ ನವೆಂಬರ್‌ ತಿಂಗಳಿನಿಂದ “ಮನ್‌ ರೇ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಮೂಡಿಗೆರೆ, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ “ಮನ್‌ ರೇ’ ಸಿನಿಮಾದ ಚಿತ್ರೀಕರಣ ನಡೆಯಲಿದೆ.