ಮನೆ ಮನರಂಜನೆ ನವೆಂಬರ್​ 17ಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆ

ನವೆಂಬರ್​ 17ಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆ

0

ಪ್ರತಿ ಸಿನಿಮಾದಲ್ಲೂ ರಕ್ಷಿತ್​ ಶೆಟ್ಟಿ ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಾರೆ. ಅದೇ ಕಾರಣಕ್ಕಾಗಿ ಅಭಿಮಾನಿಗಳಿಗೆ ಅವರು ಇಷ್ಟ ಆಗುತ್ತಾರೆ. ಈ ವರ್ಷ ಬಿಡುಗಡೆಯಾದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಕೂಡ ವಿಶೇಷ ಎನಿಸಿಕೊಂಡಿದೆ.

ಕಾರಣಾಂತರಗಳಿಂದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ ಹೊಸ ರಿಲೀಸ್​ ಡೇಟ್​ ಫಿಕ್ಸ್​ ಮಾಡಲಾಗಿದೆ. ನವೆಂಬರ್​ 17ರಂದು ಈ ಚಿತ್ರ ಬಿಡುಗಡೆ ಆಗಲಿದೆ.

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಆಯಿತು. ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕ ಬಳಿಕ ತೆಲುಗಿಗೂ ಡಬ್​ ಮಾಡಿ ಬಿಡುಗಡೆ ಮಾಡಲಾಯಿತು. ನಂತರ ಒಟಿಟಿಗೆ ಕಾಲಿಟ್ಟ ಈ ಸಿನಿಮಾ 5 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಾಯ್ತು. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಈ ಸಿನಿಮಾಗೆ ಹೇಮಂತ್ ರಾವ್​ ಅವರು ನಿರ್ದೇಶನ ಮಾಡಿದ್ದಾರೆ. ಚರಣ್​ ರಾಜ್​ ಅವರು ಸಂಗೀತ ನೀಡಿರುವ ಹಾಡುಗಳಿಗೆ ಜನರು ತಲೆದೂಗಿದ್ದಾರೆ. ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಅವಿನಾಶ್​ ಮುಂತಾದವರು ಪೋಷಕ ಪಾತ್ರಗಳಲ್ಲಿ ಇದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ನಟಿ ಚೈತ್ರಾ ಆಚಾರ್​ ಅವರು ಬಣ್ಣ ಹಚ್ಚಿದ್ದಾರೆ.