ಮನೆ ಮಾನಸಿಕ ಆರೋಗ್ಯ ಬೈಪೋಲಾರ್ ಎಫೆಕ್ಟಿವ್ ಡಿಸಾರ್ಡರ್

ಬೈಪೋಲಾರ್ ಎಫೆಕ್ಟಿವ್ ಡಿಸಾರ್ಡರ್

0

ಅವಧಿಗೊಂದಾವರ್ತಿ ಬರುವ, ಬಂದರೆ 3 ರಿಂದ 9 ತಿಂಗಳ ಕಾಲ ಬಾಧಿಸುವ ಈ ಕಾಯಿಲೆಯನ್ನು ವ್ಯಕ್ತಿಯ ಭಾವನೆಗಳು ತಾರಕಕ್ಕೆ ಮುಟ್ಟುತ್ತದೆ. ಈ ಕಾಯಿಲೆಯಲ್ಲಿ ಎರಡು ಮುಖಗಳಿವೆ. ಒಂದು ಮುಖ “ಮೇನಿಯಾ”, ಇನ್ನೊಂದು ಮುಖ ಡಿಪ್ರೆಶನ್, ಇದನ್ನು ಮೇನಿಕ್ ಡಿಪ್ರೆಸಿವ್ ಸೈಕೋಸಿಸ್ ಎಂತಲೂ ಕರೆಯುತ್ತಾರೆ. ಗಂಡಸರಿಗಿಂತ ಹೆಂಗಸರನ್ನು ಹೆಚ್ಚಾಗಿ ಕಾಣುವ ಈ ಕಾಯಿಲೆ ಸಾಮಾನ್ಯವಾಗಿ 25 ರಿಂದ 40 ವರ್ಷ ವಯಸ್ಸಿನವರಿಗೆ ಕಾಣಿಸಿಕೊಳ್ಳುತ್ತದೆ.

ಮೇನಿಯಾ :  ಇಲ್ಲಿ ಎಲ್ಲವೂ ಅತಿ, ವಿಪರೀತ ! ಮಾತು, ಚಟುವಟಿಕೆ, ಖರ್ಚು ಮಾಡುವುದು, ಸಂತೋಷ, ಕೋಪ, ಆತ್ಮವಿಶ್ವಾಸ, ತನ್ನ ಬಗ್ಗೆ ಜಂಭ, ಯೋಚನೆಗಳು, ಆಲೋಚನೆಗಳು, ಎಲ್ಲವೂ ಅತಿಯಾಗಿರುತ್ತದೆ. ವ್ಯಕ್ತಿ ವಿನಾಕಾರಣ ಖುಷಿ ಪಡುತ್ತಾನೆ ಅಥವಾ ವಿಪರೀತ ಕೋಪ, ಸಿಟ್ಟು ಮಾಡುತ್ತಾನೆ. ನಿಂತಲ್ಲಿ ನಿಲ್ಲುವುದಿಲ್ಲ, ಮಾತನಾಡಲು ಪ್ರಾರಂಭಿಸಿದರೆ, ನಿಲ್ಲುವುದಿಲ್ಲ. ಭೂಮಿಯ ಮೇಲೆ, ಆಕಾಶದ ಕೆಳಗಿರುವ ಎಲ್ಲಾ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಾನೆ. ತಾನೇ ದೊಡ್ಡವನು, ತನ್ನಲ್ಲಿ ಅಪರಿಮಿತ ಶಕ್ತಿ, ಸಾಮರ್ಥ್ಯ, ಬುದ್ಧಿ, ಚತುರತೆಗಳಿವೆ. ತಾನು ಏನನ್ನಾದರೂ ಮಾಡಬಲ್ಲೆ, ಸಮಾಜದ ಅತಿ ಗಣ್ಯ ವ್ಯಕ್ತಿಗಳೆಲ್ಲ, ತನ್ನ ದೋಸ್ತಿಗಳು ಎನ್ನುತ್ತಾರೆ.

ಸದಾ ಲಕ್ಷ, ಕೋಟಿಗಳ ಸಂಖ್ಯೆಯಲ್ಲಿ ಹಣದ ವಿಚಾರ ಮಾತನಾಡುತ್ತಾನೆ. ಅಪರಿಚಿತನೊಂದಿಗೆ ಸ್ನೇಹ ಬೆಳೆಸಿ, ದಾರಾಳಿಯಂತೆ ಖರ್ಚು ಮಾಡುತ್ತಾನೆ. ದುಬಾರಿ ವಸ್ತುಗಳನ್ನೆಲ್ಲ ಅಗತ್ಯವಿಲ್ಲದಿದ್ದರೂ ಕೊಂಡುಕೊಳ್ಳುತ್ತಾನೆ. ರಾತ್ರಿಯಿಡಿ ನಿದ್ದೆ ಮಾಡದೆ ಏರು ದ್ವನಿಯಲ್ಲಿ ರೇಡಿಯೋ, ಕ್ಯಾಸೆಟ್ ಹಾಕಿ ಅಥವಾ ಟಿವಿ ಹಾಕಿಕೊಂಡು ನೋಡಬಹುದು. ಸಿನಿಮಾ ನಟ, ನಟಿಯಂತೆ ಸಿಂಗರಿಸಿಕೊಳ್ಳಬಹುದು. ಕೆಲವು ಸಲ ವಿಪರೀತ ಕೋಪದಿಂದ ಎಲ್ಲರ ಮೇಲೆ ಅಕ್ರಮಣ ಮಾಡಿ ಹಿಂಸಚಾರಕ್ಕೂ ಇಳಿಯಬಹುದು.

ಮೆದುಳಿನಲ್ಲಿ ಡೋಪಮಿನ್ ನರವಾಹಕ ವಸ್ತು ಹೆಚ್ಚಾಗುವುದೇ ಈ ಮೇನಿಯ ಲಕ್ಷಣಗಳಿಗೆ ಕಾರಣ.

ಹೆಲೋಪೀರಿಡಾಲ್, ಲಿಥಿಯಂ, ಕಾರ್ಬಮಜೇಪಿನ್, ಸೋಡಿಯಂ ವಾಲ್, ಪ್ರೋಯೆಟ್ ನಂತಹ ಔಷಧಿ, ವಿದ್ಯುತ್ ಕಂಪನ, ಚಿಕಿತ್ಸೆಗಳು, ಮಿನಿಯ ಖಾಯಿಲೆಯನ್ನು ಹತೋಟಿಯಲ್ಲಿಡುತ್ತವೆ.

ಇನ್ನೊಂದು ಅವಧಿಯಲ್ಲಿ ಅಥವಾ ಪ್ರತ್ಯೇಕವಾಗಿ, ಡಿಪ್ರೆಶನ್ ಅಥವಾ ಖಿನ್ನತೆ ಕಾಯಿಲೆ ಕಾಣಿಸಿಕೊಳ್ಳುತ್ತದೆ.