ಮನೆ ಕ್ರೀಡೆ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನಕ್ಕೆ 8 ವಿಕೆಟ್’ಗಳ ಜಯ

ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನಕ್ಕೆ 8 ವಿಕೆಟ್’ಗಳ ಜಯ

0

ಚೆನ್ನೈ (ತಮಿಳುನಾಡು): ವಿಶ್ವಕಪ್ ಕ್ರಿಕೆಟ್ ನಲ್ಲಿ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ನಂತರ ಇದೀಗ ಪಾಕಿಸ್ತಾನವನ್ನು ಮಣಿಸಿದೆ.

ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಹಾಗು ರಹಮತ್ ಶಾ ಅವರ ತಲಾ ಅರ್ಧಶತಕದಾಟದ ನೆರವಿನಿಂದ ಅಫ್ಘಾನಿಸ್ತಾನ 6 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್ ಗಳಿಂದ ಭರ್ಜರಿ ಜಯಭೇರಿ ಬಾರಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ 50 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಗಳನ್ನು ಕಲೆಹಾಕಿತ್ತು.

283 ರನ್ ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ, ರಹಮಾನುಲ್ಲಾ ಗುರ್ಬಾಜ್ (65), ಇಬ್ರಾಹಿಂ ಜದ್ರಾನ್ (87) ಮತ್ತು ರಹಮತ್ ಶಾ (77) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಅಫ್ಘಾನಿಸ್ತಾನ  ತಂಡ ಇನ್ನು 6 ಬಾಲ್ ಉಳಿಸಿಕೊಂಡು 286 ರನ್ ಗಳಿಸಿ, 8 ವಿಕೆಟ್ ಗಳ ಗೆಲುವು ಕಂಡಿತು.