ಮನೆ ಸುದ್ದಿ ಜಾಲ ಅಮೆರಿಕ : ಶ್ವೇತಭವನ ಸಮೀಪ ಗುಂಡಿನ ದಾಳಿ

ಅಮೆರಿಕ : ಶ್ವೇತಭವನ ಸಮೀಪ ಗುಂಡಿನ ದಾಳಿ

0

ವಾಷಿಂಗ್ಟನ್ ಡಿ.ಸಿ(ಯುಎಸ್): ಶ್ವೇತಭವನದ ಸೆಕ್ಯೂರಿಟಿ ಚೆಕ್ ಪಾಯಿಂಟ್ ಸಮೀಪ ಬಂದು ಬಂದೂಕುದಾರಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಶನಿವಾರ ಸಂಜೆ 6ರ ಸುಮಾರಿಗೆ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಗುಂಡು ತಗುಲಿ ಇತರೆ ಓರ್ವ ವ್ಯಕ್ತಿಯೂ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸೆಕ್ಯೂರಿಟ್ ಬೂತ್ ಸಮೀಪ ಬಂದ ಓರ್ವ ವ್ಯಕ್ತಿ, ತನ್ನ ಬ್ಯಾಗ್‌ನಿಂದ ಶಸ್ತ್ರಾಸ್ತ್ರ ತೆಗೆದು ಗುಂಡು ಹಾರಿಸಲು ಶುರು ಮಾಡಿದ. ಸೀಕ್ರೆಟ್ ಸರ್ವೀಸಸ್ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಆತ ಗಾಯಗೊಂಡ. ನಂತರ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ. ಸೀಕ್ರೆಟ್ ಸರ್ವೀಸಸ್‌ನ ಯಾವುದೇ ಸಿಬ್ಬಂದಿಗೆ ಗಾಯವಾಗಿಲ್ಲ ಎಂದು ಸೀಕ್ರೆಟ್ ಸರ್ವೀಸಸ್ ಮಾಹಿತಿ ನೀಡಿದೆ. “ಅಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು ಗುಂಡಿನ ಶಬ್ದಗಳನ್ನು ಕೇಳಿದ್ದಾರೆ. ಅವರಿಗೆ ತಕ್ಷಣ ಪತ್ರಿಕಾಗೋಷ್ಠಿಯ ಕೊಠಡಿಯೊಳಗೆ ಆಶ್ರಯ ಪಡೆಯಲು ಸೂಚಿಸಲಾಯಿತು. ಅಲ್ಲಿ ಸೀಕ್ರೆಟ್ ಸರ್ವೀಸಸ್ ಅಧಿಕಾರಿಗಳು ಅವರಿಗೆ ರಕ್ಷಣೆ ನೀಡಿದರು. ಈ ಘಟನೆಯ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿದ್ದರು” ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದಾರೆ. “ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರಗಳಿಗೆ ಜಾಗವಿಲ್ಲ. ದುರದೃಷ್ಟವಶಾತ್, ಇದೆಲ್ಲ ಸಾಮಾನ್ಯವಾಗುತ್ತಿದೆ.

ರಾಜಕೀಯ ಹಿಂಸಾಚಾರ ಯಾವುದೇ ಕಾರಣಕ್ಕೂ ಉತ್ತರವಲ್ಲ. ಇದು ಇಲ್ಲಿಗೆ ನಿಲ್ಲಬೇಕು” ಎಂದು ಅಮೆರಿಕ ಕಾಂಗ್ರೆಸ್‌ನ ಪ್ರತಿನಿಧಿ ರ್ಯಾಂಡಿ ಫೈನ್ ಒತ್ತಾಯಿಸಿದ್ದಾರೆ. ಕೆಲವು ವಾರಗಳ ಹಿಂದೆ, ಶ್ವೇತಭವನದಲ್ಲಿ ಭೋಜನಕೂಟ ನಡೆಯುತ್ತಿದ್ದ ಸಂದರ್ಭದಲ್ಲೇ ಗುಂಡಿನ ದಾಳಿ ನಡೆದಿತ್ತು. ಇದನ್ನು “ಟ್ರಂಪ್ ಅವರ ಹತ್ಯೆಗೆ ನಡೆದ ಸಂಚು” ಎಂದು ಅಧಿಕಾರಿಗಳು ಹೇಳಿದ್ದರು. ಈ ಭೋಜನಕೂಟದಲ್ಲಿ ಅಧ್ಯಕ್ಷ ಟ್ರಂಪ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ದಾಳಿಯನ್ನು ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ದಾಳಿಗೆ ಮುಂದಾದ ಆರೋಪಿಯನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು ಎಂಬುದಾಗಿದೆ.