ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ (ಮೇ 25) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಆರ್ ತಂಡವು ಪ್ಲೇಆಫ್ ಪ್ರವೇಶ ಮಾಡಿತು. ಇದೀಗ ನಾಲ್ಕೂ ಸ್ಥಾನಗಳು ಭರ್ತಿಯಾಗಿವೆ. ಮುಂದಿನ ಹಂತದ ಲೆಕ್ಕಾಚಾರ ಹೇಗಿರಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜಸ್ಥಾನ್ ರಾಯಲ್ಸ್ ತಂಡವು ಎಂಐ ವಿರುದ್ಧ ಗೆಲುವಿನೊಂದಿಗೆ ಐಪಿಎಲ್ 2026ರ ಪ್ಲೇಆಫ್‌ಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಇದರೊಂದಿಗೆ ಈ ಬಾರಿಯ ಟೂರ್ನಿಯ ಟಾಪ್-4 ತಂಡಗಳ ಪಟ್ಟಿ ಪಕ್ಕಾ ಆಗಿದ್ದು, ಮುಂದಿನ ಹಂತದ ಫೈಟ್ ಕುತೂಹಲ ಮೂಡಿಸಿದೆ. ಅದರಂತೆಯೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಅಗ್ರಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಲ್ಲಿದೆ.
ಮೂರನೇ ಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ನಾಲ್ಕನೇ ಸ್ಥಾನಕ್ಕೆ ರಾಜಸ್ಥಾನ್ ಇದೆ. ಪ್ಲೇಆಫ್ ಸುತ್ತಿನಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್ 1ರಲ್ಲಿ ಆರ್‌ಸಿಬಿ ಹಾಗೂ ಜಿಟಿ ತಂಡಗಳು ಫೈಟ್ ಮಾಡಲಿವೆ. ಬಳಿಕ ಅಂಕಪಟ್ಟಿಯ 3 ಮತ್ತು 4ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಎರಡು ಪಂದ್ಯಗಳ ಬಳಿಕ ಕ್ವಾಲಿಫೈಯರ್ 2 ನಡೆಯಲಿದೆ. ಕೊನೆಗೆ ಫೈನಲ್ ಪಂದ್ಯದಲ್ಲಿ ಯಾವ ತಂಡಗಳು ಮುಖಾಮುಖಿಯಾಗಲಿವೆ ಎನ್ನುವುದು ನಿರ್ಧಾರವಾಗಲಿದೆ.
ಪ್ಲೇಆಫ್ ಹಂತ ತಲುಪಿದ ತಂಡಗಳು –
- ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮೊದಲ ಸ್ಥಾನ
- ಗುಜರಾತ್ ಟೈಟಾನ್ಸ್ – ಎರಡನೇ ಸ್ಥಾನ
- ಸನ್‌ರೈಸರ್ಸ್ ಹೈದರಾಬಾದ್ (SRH) – ಮೂರನೇ ಸ್ಥಾನ
ರಾಜಸ್ಥಾನ್ ರಾಯಲ್ಸ್ (RR) – ನಾಲ್ಕನೇ ಸ್ಥಾನ
ಅಂಕಪಟ್ಟಿಯ ಮೊದಲ ಎರಡು ಸ್ಥಾನಗಳಲ್ಲಿರುವ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಕ್ವಾಲಿಫೈಯರ್ 1 ಪಂದ್ತ ನಡೆಯಲಿದೆ. ಈ ರೋಚಕ ಪಂದ್ಯವು ಮೇ 26ರ ಸಂಜೆ 7:30ಕ್ಕೆ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಸೋತ ತಂಡಕ್ಕೆ ಫೈನಲ್ ತಲುಪಲು ಕ್ವಾಲಿಫೈಯರ್ 2ನಲ್ಲಿ ಮತ್ತೊಂದು ಅವಕಾಶ ಸಿಗಲಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಕಾಳಗ ನಡೆಯಲಿದೆ. ಈ ಪಂದ್ಯವು ಮೇ 27ರ ಸಂಜೆ 7:30ಕ್ಕೆ ಮುಲ್ಲನ್‌ಪುರ್‌ನಲ್ಲಿ ನಡೆಯಲಿದೆ. ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗಿದ್ದು, ಇಲ್ಲಿ ಗೆದ್ದ ತಂಡ ಕ್ವಾಲಿಫೈಯರ್ 2ಕ್ಕೆ ಪ್ರವೇಶ ಪಡೆಯಲಿದೆ. ಸೋತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.
ಕ್ವಾಲಿಫೈಯರ್ 2 ಪಂದ್ಯ – ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್‌ನಲ್ಲಿ ಗೆದ್ದ ತಂಡಗಳ ನಡುವೆ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಒಂದು ವೇಳೆ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಸೋತು, ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ಗೆದ್ದರೆ ಈ ಎರಡೂ ತಂಡಗಳು ಕ್ವಾಲಿಫೈಯರ್ 2ರಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದವರು ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದ್ದಾರೆ. ಇದು ಉದಾಹರಣೆಗಷ್ಟೇ ಹೇಳಿರುವುದು ಪಂದ್ಯದ ಗತಿ ಏನಾಗುತ್ತದೆಯೋ ಅದರ ಮೇಲೆ ಇದು ನಿರ್ಧಾರವಾಗಲಿದೆ.
ಈ ಹಂತದ ಎಲ್ಲಾ ಪಂದ್ಯಗಳು ಹೈ-ವೋಲ್ಟೇಜ್ ಆಗಿರಲಿದೆ. ಇದೆಲ್ಲದ ನಡುವೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಫೈನ್‌ಲ್‌ಗೆ ಏರಿ ಅಲ್ಲ ಗೆದ್ದು ಟ್ರೋಫಿ ಎತ್ತಿ ಹಿಡಿಯುತ್ತಾ ಅಥವಾ ಬೇರೆ ತಂಡ ಚಾಂಪಿಯನ್ ಆಗುತ್ತಾ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಕ್ವಾಲಿಫೈಯರ್ 1ರಲ್ಲಿ ಮುಖಾಮುಖಿಯಾಗಲಿರುವ ತಂಡಗಳು –
- ಆರ್‌ಸಿಬಿ Vs ಗುಜರಾತ್ ಟೈಟಾನ್ಸ್
- ದಿನಾಂಕ: ಮೇ 26ರ ಸಂಜೆ
- ಸಮಯ : ಸಂಜೆ 7:30ಕ್ಕೆ
- ಸ್ಥಳ: ಧರ್ಮಶಾಲಾದಲ್ಲಿ
ಎಲಿಮಿನೇಟರ್ ಪಂದ್ಯದಲ್ಲಿ ಕಾದಾಡಲಿರುವ ತಂಡಗಳು –
- ಸನ್‌ರೈಸರ್ಸ್ ಹೈದರಾಬಾದ್ Vs ರಾಜಸ್ಥಾನ್
- ದಿನಾಂಕ: ಮೇ 27ರ ಸಂಜೆ
- ಸಮಯ : ಸಂಜೆ 7:30ಕ್ಕೆ
- ಸ್ಥಳ: ಮುಲ್ಲನ್‌ಪುರ್
ಕ್ವಾಲಿಫೈಯರ್ 2 ಪಂದ್ಯದ ದಿನಾಂಕ, ಸ್ಥಳ – ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್‌ನಲ್ಲಿ ಗೆದ್ದ ತಂಡಗಳ ನಡುವೆ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಈ ಹಂತಕ್ಕೆ ಯಾವ ತಂಡಗಳು ಬರಲಿವೆ ಎಂದು ಕಾದುನೋಡಬೇಕಿದೆ. ಒಟ್ಟಿನಲ್ಲಿ ಇದೀಗ ಇದರಲ್ಲಿ ಯಾರು ಗೆದ್ದು ಫೈನಲ್ ಪ್ರವೇಶ ಮಾಡುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.
- ದಿನಾಂಕ: ಮೇ 29, * ಸ್ಥಳ : ನ್ಯೂ ಚಂಡೀಗಢದ ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.., ಐಪಿಎಲ್ 2026 ಫೈನಲ್ ಪಂದ್ಯದ ದಿನಾಂಕ, ಸ್ಥಳ – * ದಿನಾಂಕ: ಮೇ 31, * ಸ್ಥಳ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ


















