ರಾಜು : (ಹೋಟೆಲ್ ಗೆ ಹೋಗಿ) ತಿಂಡಿ ಏನಿದೆಯಪ್ಪಾ ?
ಮಾಣಿ : ಇಡ್ಲಿ, ವಡೆ, ರೈಸ್ ಬಾತ್, ದೋಸೆ, ಚಪಾತಿ ಬೇಗ ಆಗುತ್ತಾ ?
ಮಾಣಿ : ಸರ್ ನಿಮ್ಮಂತವರಿಗೆ ತೊಂದರೆ ಆಗಬಾರದು ಅಂತ ಹೋದ ವಾರನೇ ಮಾಡಿಬಿಟ್ಟಿದ್ದೀವಿ.
***
ರಾಜು : ನನ್ನ ಹೆಂಡ್ತಿಗೆ ನೀರು ಅಂದ್ರೆ ತುಂಬಾ ಭಯ ಕಣೋ ಕಿಟ್ಟು.
ಕಿಟ್ಟು : ಅದು ಹೇಗೆ ಹೇಳ್ತೀಯಾಕಾಣುತ್ತಿತ್ತು.
ರಾಜು : ಹೇಗೇಂದ್ರೆ ಒಬ್ಬ್ಳೇ ಸ್ನಾನ ಮಾಡೋಕೂ ಹೆದರ್ತಾಳೆ. ನೆನ್ನೆ ನೋಡ್ತೀನಿ, ಸೆಕ್ಯೂರಿಟಿ ಗಾರ್ಡ್ ಜತೆ ಸ್ನಾನ ಮಾಡ್ತಾ ಇದ್ಲು.
***
ಗೀತಾ : ರೀ, ಚಿನ್ನದ ಬೆಲೆ ಎಷ್ಟು ಏರ್ತಾ ಇದೆ ?
ರಾಜು : ಇದಕ್ಕೆಲ್ಲ ನೀನೇ ಕಾರಣ.
ಗೀತಾ : ನಾನೇನ್ರೀ ಮಾಡಿದೆ ?
ರಾಜು : ಎಸ್.ಎಂ.ಎಸ್ ಕಳಿಸಿ ಅಂತ ಕೇಳ್ತಾ ಇದ್ದೆ. ನಾನು ಹೇಗೆ ಚಿನ್ನದಂತಹ ಎಸ್.ಎಮ್.ಎಸ್ ಕಳ್ಸಿ ಕಳ್ಸಿ ಚಿನ್ನ ಎಲ್ಲ ಮುಗ್ದೋಯ್ತು.
***
ಗೀತಾ : ರೀ ನಿಮಗೆ ವ್ಯಾಕರಣ ಗೊತ್ತಾ ?
ರಾಜು : ಅಲ್ವೇ ನಾನು ಕನ್ನಡದಲ್ಲಿ ಎಂ.ಎ ಮಾಡಿದೀನಿ ನನಗೆ ವ್ಯಾಕರಣ ಗೊತ್ತಾ ಅಂತ ಕೇಳ್ತಿಯಲ್ಲ?
ಗೀತ : ಹಾಗಾದ್ರೆ ಹೇಳಿ ನಾನು ಅತ್ಯಂತ ಸುಂದರಿಯಾಗಿದ್ದೇನೆ ಇದು ಯಾವ ಕಾಲ ?
ರಾಜು : ಇದು ಭೂತಕಾಲ ಗೊತ್ತಾಯ್ತಾ. ?
***
ರಾಜು : ನನ್ನ ಹೃದಯದಲ್ಲಿ ಜಾಗ ಕೊಡ್ತೀನಿ, ಬರ್ತಿಯಾ ?
ಗೀತಾ : ಸಾಕು ಮುಚ್ಚೋಬಾಯಿ, ಕಾಲಿನಲ್ಲಿರೋ ಚಪ್ಪಲಿ ತೆಗಿಬೇಕಾ ?
ರಾಜು : ನನ್ನ ಹೃದಯ ದೇವಾಲಯವಲ್ಲ ಚಪ್ಪಲಿ ಹಾಕ್ಕೊಂಡೆ ಬಾ ಪರವಾಗಿಲ್ಲ.