ಮನೆ ಮನರಂಜನೆ ರಾಮ್‌ ಚರಣ್‌ ನಟನೆಯ ʼಗೇಮ್‌ ಚೇಂಜರ್ʼ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

ರಾಮ್‌ ಚರಣ್‌ ನಟನೆಯ ʼಗೇಮ್‌ ಚೇಂಜರ್ʼ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

0

ಹೈದರಾಬಾದ್: ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ ಸಿನಿ ಕೆರಿಯರ್‌ ಮತ್ತೊಂದು ಬಿಗ್‌ ಮೂವಿ ಎಂದೇ ಹೇಳಲಾಗುತ್ತಿರುವ ʼಗೇಮ್‌ ಚೇಂಜರ್ʼ ಚಿತ್ರತಂಡ ದಸರಾ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದೆ.

ಶಂಕರ್‌ – ರಾಮ್‌ ಚರಣ್‌ ಕಾಂಬಿನೇಷನ್‌ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ವಿಜಯ ದಶಮಿಯಲ್ಲಿ ಹಬ್ಬದ ಪ್ರಯುಕ್ತ ಸಿನಿಮಾ ತಂಡ ಪೋಸ್ಟರ್‌ ವೊಂದನ್ನು ರಿಲೀಸ್‌ ಮಾಡಿ ಕುತೂಹಲ ಹೆಚ್ಚಿಸಿದೆ.

ನೇರಳೆ ಬಣ್ಣದ ಕುರ್ತಾ ಹಾಕಿಕೊಂಡು ಸಾಂಪ್ರಾದಾಯಿಕ ಉಡುಗೆಯಲ್ಲಿ ರಾಮ್‌ ಚರಣ್‌ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾದ ʼ ಜರಗಂಡಿʼ  ಎನ್ನುವ ಮೊದಲ ಹಾಡನ್ನು ದೀಪಾವಳಿ ಹಬ್ಬಕ್ಕೆ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಅನೌನ್ಸ್‌ ಮಾಡಿದೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರೀಶ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಎಸ್‌ಎಸ್ ಥಮನ್ ಸಿನಿಮಾಕ್ಕೆ ಮ್ಯೂಸಿಕ್‌ ನೀಡಲಿದ್ದಾರೆ.

ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದ್ದು, ಕಾರ್ತಿಕ್ ಸುಬ್ಬರಾಜ್ ಚಿತ್ರದ ಕಥೆ ಬರೆದಿದ್ದಾರೆ. ರಾಮ್‌ ಚರಣ್ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಅಂಜಲಿ, ಸಮುದ್ರಕಣಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನೀಲ್, ನವೀನ್ ಚಂದ್ರ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.