ಚೆನ್ನೈ: ನಟ ಸೂರ್ಯ ಅವರ ʼ ಕಂಗುವʼ ಸಿನಿಮಾ ಚರ್ಚೆಯಲ್ಲಿದೆ. ಈ ನಡುವೆ ಅವರ 43ನೇ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಯೊಂದು ಹೊರಬಿದ್ದಿದೆ.
ಸುಧಾ ಕೊಂಗರ ‘ಸೂರರೈ ಪೊಟ್ರು’ ಬಳಿಕ ಸೂರ್ಯ ಅವರ ಜೊತೆ ಮತ್ತೊಮ್ಮೆ ಸಿನಿಮಾ ಮಾಡುತ್ತಿರುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾ ಅನೌನ್ಸ್ ಆದ ನಂತರ ಸಿನಿಮಾದ ಬಗ್ಗೆ ಇದೀಗ ಬಿಗ್ ಅಪ್ಡೇಟ್ ವೊಂದು ಹೊರಬಿದ್ದಿದೆ. ಸಿನಿಮಾದಲ್ಲಿ ಬಹು ತಾರಾಗಣವಿರಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ಶಕ್ತಿಯುತವೆಂದು ಹೇಳಿ ಮೂರು ಪ್ರಧಾನ ಪಾತ್ರವನ್ನು ರಿವೀಲ್ ಮಾಡಿದೆ. ಮಾಲಿವುಡ್ ನಟ ದುಲ್ಕರ್ ಸಲ್ಮಾನ್, ನಜ್ರಿಯಾ ಫಹಾದ್ ಮತ್ತು ವಿಜಯ್ ವರ್ಮಾ ಅವರು ಸಿನಿಮಾದಲ್ಲಿ ಇರಲಿದ್ದಾರೆ ಎಂದು ಸಿನಿಮಾ ತಂಡ ಹೇಳಿದೆ. ಇದರ ಜೊತೆಗೆ ʼ ಪುರಾಣನೂರುʼ ಎನ್ನುವ ಸಿನಿಮಾದ ಅರ್ಧ ಟೈಟಲ್ ನ್ನು ಕೂಡ ರಿವೀಲ್ ಮಾಡಲಾಗಿದೆ. ಸಿನಿಮಾದ ಮೇಲ್ಗಡೆ ಇರುವ ಟೈಟಲ್ ನ್ನು ಕುತೂಹಲವಾಗಿಯೇ ಇಡಲಾಗಿದೆ.
ವಿಜಯ್ ವರ್ಮಾ ನೆಗೆಟಿವ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದು ಇವರ ಮೊದಲ ತಮಿಳು ಸಿನಿಮಾವಾಗಿರಲಿದೆ. ಇನ್ನು ನಜ್ರಿಯಾ ಒಂಬತ್ತು ವರ್ಷದ ಬಳಿಕ ಕಾಲಿವುಡ್ ಗೆ ಮರಳಿದ್ದಾರೆ. ದುಲ್ಕರ್ ಸಲ್ಮಾನ್ ಅವರು ಈ ಸಿನಿಮಾದ ಮೂಲಕ 5ನೇ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಂಗೀತ ನಿರ್ದೇಶನ – ಸ್ಕೋರ್ ಮತ್ತು ಅತ್ಯುತ್ತಮ ಮೂಲ ಚಿತ್ರಕಥೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಸುಧಾ ಕೊಂಗರ ಅವರ ‘ಸೂರರೈ ಪೊಟ್ರು’ ಗಳಿಸಿತ್ತು.