ಮನೆ ಸುದ್ದಿ ಜಾಲ ಫ್ಲೆಕ್ಸ್ ಹಾವಳಿ: ಯಾವುದೇ ಪಕ್ಷದವರಾದ್ರೂ ಸರಿ ದಂಡ ಹಾಕಿ  ಎಂದ ಸಂಸದ ಪ್ರತಾಪ್ ಸಿಂಹ

ಫ್ಲೆಕ್ಸ್ ಹಾವಳಿ: ಯಾವುದೇ ಪಕ್ಷದವರಾದ್ರೂ ಸರಿ ದಂಡ ಹಾಕಿ  ಎಂದ ಸಂಸದ ಪ್ರತಾಪ್ ಸಿಂಹ

0

ಮೈಸೂರು: ಕಳೆದ ಹಲವು ದಿನಗಳಿಂದ ಫ್ಲೆಕ್ಸ್ ಅಳವಡಿಸಿ ನಗರವನ್ನು ಹಾಳು ಮಾಡುತ್ತಿದ್ದಾರೆ. ಫ್ಲೆಕ್ಸ್ ಹಾಕಿರುವವರು ಯಾವ ಪಕ್ಷದವರಾದರೂ ಸರಿ ಅವರಿಗೆ ದಂಡ ಹಾಕಿ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾತನಾಡಿರುವ ಅವರು, ರಾಜಕೀಯ ಮುಖಂಡರು ಹುಟ್ಟುಹಬ್ಬ, ರಾಜಕೀಯ ಸಮಾರಂಭಕ್ಕೆ ಫ್ಲೆಕ್ಸ್ ಹಾಕ್ತಿದ್ದಾರೆ. ಇದರಿಂದ ಮೈಸೂರು ನಗರ ಗಬ್ಬೆದ್ದು ಹೋಗುತ್ತೆ‌. ಬೆಂಗಳೂರು ನಗರದಲ್ಲೇ ಫ್ಲೆಕ್ಸ್ ಗಳನ್ನು ತೆಗದುಹಾಕ್ತಿದ್ದಾರೆ. ಆದರೆ ಮೈಸೂರಿನಲ್ಲಿ ಯಾಕೆ ಅದಕ್ಕೆ ಅವಕಾಶ ಕೊಟ್ಟಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ಫ್ಲೆಕ್ಸ್ ಹಾಕಿದ್ರೂ ದಂಡ ಹಾಕಿ. ಬಿಜೆಪಿಯವರೂ ಫ್ಲೆಕ್ಸ್ ಹಾಕಿದ್ರೂ ಕೂಡಾ ದಂಡ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಪುಟ್ ಪಾತ್ ಒತ್ತುವರಿ ವಿಚಾರ ಕುರಿತು ಪ್ರತಿಕ್ರಿಯಿಸಿ,  ಎಲ್ಲವನ್ನೂ ಒಂದು ವಾರದಲ್ಲಿ ತೆರವು ಮಾಡಿಸುತ್ತೇನೆ. ಖುದ್ದು ನಾನೇ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಪುಟ್ ಪಾತ್ ವ್ಯಾಪಾರಿಗಳು ನಿಗದಿತ ಸ್ಥಳಗಳಲ್ಲಿ ವ್ಯಾಪಾರ ಮಾಡಬೇಕು. 2 ಸಾವಿರ ಜನಕ್ಕೋಸ್ಕರ ಇಡೀ ಮೈಸೂರು ನಗರವನ್ನು ಗಬ್ಬೆಬ್ಬಿಸಲು ಆಗಲ್ಲ ಎಂದರು.